Home » ಕಾಡು ಕೋಣಗಳ ದಾಂದಲೆ: ಕಾಫಿ ತೋಟ ಹಾನಿ: ಗ್ರಾಮಸ್ಥರ ಆಕ್ರೋಶ

ಕಾಡು ಕೋಣಗಳ ದಾಂದಲೆ: ಕಾಫಿ ತೋಟ ಹಾನಿ: ಗ್ರಾಮಸ್ಥರ ಆಕ್ರೋಶ

0 comments

Madikeri: ಕೊಡಗು ಜಿಲ್ಲೆಯಾದ್ಯಂತ ದಶಕಗಳಿಂದ ಕಾಡಾನೆಗಳ ಉಪಟಳ ಸರ್ವೆ ಸಾಮಾನ್ಯ. ರೈತರ ಕಾಫಿ ತೋಟದಲ್ಲಿ ದಿನಬೆಳಗಾದರೆ ಆನೆಗಳು ಕಂಡುಬಂದಿರುವುದು ಸರ್ವ ಸಾಮಾನ್ಯವಾಗಿದೆ. ಅದರೇ ಇದೀಗ ಕಾಡು ಕೋಣಗಳ ಹಿಂಡು ವಿ. ಬಾಡಗ ಗ್ರಾಮದ ಕಾಫಿ ತೋಟಗಳಲ್ಲಿ ಬೀಡುಬಿಟ್ಟು ಕಾಫಿ ತೋಟದಲ್ಲಿ ಅಪಾರ ಕೃಷಿ ನಷ್ಟ ಮಾಡಿದೆ.

ಆದರೆ ಇದಕ್ಕೆ ಪ್ರತೀ ಬಾರಿಯೂ ಅರಣ್ಯ ಇಲಾಖೆ ಇದರ ಹೊಣೆ ಹೊರಬೇಕಾಗುತ್ತದೆ. ಹಾಗಾಗಿ ಈ ಬಾರಿಯು ಅರಣ್ಯ ಇಲಾಖೆಯ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

You may also like