3
Mock Drill: ಪಾಕಿಸ್ತಾನದಿಂದ ಪಹಲ್ಗಾಮ್ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ಸರ್ಕಾರ ‘ಆಪರೇಷನ್ ಸಿಂಧೂರ್’ ಅನ್ನು ಪ್ರಾರಂಭಿಸಿ 200 ಭಯೋತ್ಪಾದಕರನ್ನು ಹತ್ಯೆ ಮಾಡಿದೆ. ಇದರ ನಡುವೆ ಮುಂಚಿತವಾಗಿ ನಿರ್ಧಾರವಾಗಿದ್ದ ಕಾರವಾರ ಮತ್ತು ರಾಯಚೂರಿನ ಮಾತ್ ಡ್ರಿಲ್ಗಳು ದಿಡೀರ್ ಎಂದು ಕ್ಯಾನ್ಸಲ್ ಆಗಿದೆ.
ಹೌದು, ಕೆಟಗೆರಿ 2 ನಲ್ಲಿ ಉತ್ತರಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕೈಗಾ ಹಾಗೂ ಕದಂಬ ನೌಕಾನೆಲೆಯನ್ನು ಆಯ್ಕೆ ಮಾಡಲಾಗಿತ್ತು. ಆದರೆ ಅಂತಿಮ ಹಂತದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ. ಹೀಗಾಗಿ ನಾಳಿನ ಮಾಕ್ ಡ್ರಿಲ್ ರದ್ದು ಮಾಡಲಾಗಿದೆ. ಆದರೆ ಒಂದು ವಾರದಲ್ಲಿ ಸರಕಾರ ನಿಗದಿ ಮಾಡುವ ದಿನಾಂಕದಲ್ಲಿ ಮಾಕ್ ಡ್ರಿಲ್ ನಡೆಸಲು ನಿರ್ಧರಿಸಲಾಗಿದೆ.
ಇನ್ನು ರಾಯಚೂರಿನಲ್ಲಿ ನಡಯಬೇಕಿದ್ದ ಮಾಕ್ ಡ್ರಿಲ್ ಮುಂದೂಡಲಾಗಿದೆ. ಕೇಂದ್ರ ಸರ್ಕಾರದ ಸೂಚನೆ ಮೇರೆಗೆ ಈ ನಿರ್ಧಾರ ಕೈಗೊಳ್ಳಲಾಗಿದೆ.
