Home » Sullia: ಬಿಳಿನೆಲೆ ಬಳಿ ಕಾರುಗಳ ನಡುವೆ ಅಪಘಾತ- ಓರ್ವ ಸಾವು, ಇಬ್ಬರಿಗೆ ಗಾಯ!

Sullia: ಬಿಳಿನೆಲೆ ಬಳಿ ಕಾರುಗಳ ನಡುವೆ ಅಪಘಾತ- ಓರ್ವ ಸಾವು, ಇಬ್ಬರಿಗೆ ಗಾಯ!

0 comments
Accident

Sullia: ಮೇ 6 ರಂದು ಬಿಳಿನೆಲೆ ಗ್ರಾಮದ ಸುಬ್ರಹ್ಮಣ್ಯ-ಗುಂಡ್ಯ ರಾಜ್ಯ ಹೆದ್ದಾರಿಯಲ್ಲಿ ಕೈಕಂಬ-ಗೋಪಾಲಿ ಬಳಿ ಇನ್ನೋವಾ ಕಾರು ಸ್ವಿಫ್ಟ್‌ ಕಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ. ಈ ಘಟನೆಯಲ್ಲಿ ಓರ್ವ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ.

ಮೃತರನ್ನು ಬೆಂಗಳೂರಿನ ರಾಮನಗರದ 73 ವರ್ಷ ಯಲ್ಲಿಗಯ್ಯ ಎಂದು ಗುರುತಿಸಲಾಗಿದೆ.

ಕಾರು ಚಲಾಯಿಸುತ್ತಿದ್ದ ಮಗ ನವೀನ್‌ (29) ಮತ್ತು ನವೀನ್‌ ಅವರ ತಾಯಿ ದೈಯಪ್ಪ (52) ಅಪಘಾತದಲ್ಲಿ ಗಾಯಗೊಂಡಿದ್ದಾರೆ. ಸಂಜೆ ಸುಬ್ರಹ್ಮಣ್ಯದಿಂದ ಬರುತ್ತಿದ್ದ ಇನ್ನೋವಾ ಕಾರು ಸ್ವಿಫ್ಟ್‌ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಈ ಅಪಘಾತ ನಡೆದಿದ್ದು, ಡಿಕ್ಕಿಯ ಪರಿಣಾಮವಾಗಿ ಸ್ವಿಫ್ಟ್‌ ಕಾರು ಪಲ್ಟಿಯಾಗಿದ್ದು, ಕಾರಿನಲ್ಲಿದ್ದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ಮನೆಗೆ ಹಿಂತಿರುಗುತ್ತಿದ್ದರು.

ಆಂಬುಲೆನ್ಸ್‌ನಲ್ಲಿ ಗಾಯಾಳುಗಳನ್ನು ಕಡಬ ಆಸ್ಪತ್ರೆಗೆ ಸಾಗಿಸಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆಂದು ಮಂಗಳೂರಿನ ಕರೆದೊಯ್ಯಲಾಯಿತು. ಗಂಭೀರ ಗಾಯಗೊಂಡ ಯಲ್ಲಿಗಯ್ಯ ಚಿಕಿತ್ಸೆ ಫಲಕಾರಿಯಾಗದೆ ಸಾವಿಗೀಡಾಗಿದ್ದಾರೆ.

ಕಡಬ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like