Home » Crime: ಬೆಂಗಳೂರು: ಯುವಕನ ಕೊಂದು ಸುಟ್ಟುಹಾಕಿ ದುಷ್ಕರ್ಮಿಗಳಿಂದ ವಿಕೃತಿ!

Crime: ಬೆಂಗಳೂರು: ಯುವಕನ ಕೊಂದು ಸುಟ್ಟುಹಾಕಿ ದುಷ್ಕರ್ಮಿಗಳಿಂದ ವಿಕೃತಿ!

0 comments

Crime: ಯುವಕನನ್ನು ಕೊಂದ ಬಳಿಕ ಶವಕ್ಕೆ ಬೆಂಕಿ ಹಚ್ಚಿ ದುಷ್ಕರ್ಮಿಗಳು ಪರಾರಿಯಾಗಿದ್ದಾರೆ.

ಆನೇಕಲ್ ತಾಲೂಕಿನ ಶೀಲಿಂದ್ರದೊಡ್ಡಿ ಎಂಬಲ್ಲಿ ಅಂದಾಜು 25 ವರ್ಷದ ಯುವಕನ ಶವ ಪತ್ತೆಯಾಗಿದ್ದು, ಯುವಕನನ್ನು ಕೊಲೆಗೈದು ಬಳಿಕ ಬೆಂಕಿ ಹಚ್ಚಿ ಹಂತಕರು ಪರಾರಿ ಆಗಿದ್ದಾರೆ. ಮೃತದೇಹ ಪತ್ತೆಯಾದ ಸಮೀಪ ಟಿವಿಎಸ್ ಬೈಕ್‌ ಸಹ ಪತ್ತೆಯಾಗಿದೆ. ಘಟನಾ ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಯಾವ ಕಾರಣಕ್ಕೆ ಕೊಲೆ ಆಗಿದೆ ಎಂಬುದರ ಕುರಿತು ಮಾಹಿತಿ ಇಲ್ಲ. ಮೃತರ ಗುರುತು ಕೂಡ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಮುಂದುವರಿಸಿದ್ದು, ಹೆಚ್ಚಿನ ಮಾಹಿತಿ ಇನ್ನಷ್ಟೇ ತಿಳಿದು ಬರಬೇಕಿದೆ.

You may also like