Home » Bagalkote: ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ ಅಡಿಗೆ ಬಿದ್ದು ಪ್ರಾಣಕಳೆದುಕೊಂಡ ಮೂವರು!

Bagalkote: ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ ಅಡಿಗೆ ಬಿದ್ದು ಪ್ರಾಣಕಳೆದುಕೊಂಡ ಮೂವರು!

0 comments

Bagalkote: ಓವರ್‌ಟೇಕ್‌ ಮಾಡಲು ಹೋಗಿ ಕ್ಯಾಂಟರ್‌ ಅಡಿ ಬಿದ್ದು ಬೈಕ್‌ನಲ್ಲಿ ತೆರಳುತ್ತಿದ್ದ ಮೂವರು ಬಾಲಕರು ಸ್ಥಳದಲ್ಲಿಯೇ ಸಾವಿಗೀಡಾದ ಘಟನೆ ಬಾಗಲಕೋಟೆ ತಾಲೂಕಿನ ಸೀಮಿಕೇರಿ ಬೈಪಾಸ್‌ನಲ್ಲಿ ನಡೆದಿದೆ. ಮುರನಾಳ ಗ್ರಾಮದ ನಿವಾಸಿಗಳಾದ ಸಿದ್ದು ರಾಜು ಗಣಿ(16), ಸಂತೋಷ ಕೂಡಗಿ (16) ಮತ್ತು ಕಾಮಣ್ಣ ಕುಪಲಿ (16) ಮೃತ ಬಾಲಕರು.

ಹನುಮ ಜಯಂತಿ ಹಿನ್ನೆಲೆ ಊರಿನಲ್ಲಿ ಡಿಜೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಡಿಜೆ ಮೆರವಣಿಗೆ ನೋಡಲು ಮೂವರು ಬಾಲಕರು ಬೈಕ್‌ನಲ್ಲಿ ಹೋಗಿದ್ದರು. ಗದ್ದನಕೇರಿ ಕ್ರಾಸ್‌ನಿಂದ ಹುಬ್ಬಳ್ಳಿ ಮಾರ್ಗವಾಗಿ ತೆರಳುತ್ತಿದ್ದ ಬೈಕ್‌ಗೆ ಕ್ಯಾಂಟರ್‌ ಡಿಕ್ಕಿಯಾಗಿದ್ದು, ಮೂವರು ಬಾಲಕರು ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ.

ಓವರ್‌ಟೇಕ್‌ ಮಾಡಲು ಹೋದ ಬಾಲಕರಿಗೆ ಡಿಕ್ಕಿ ಹೊಡೆದು ಬೈಕ್‌ ಪಲ್ಟಿ ಆಗಿದ್ದು, ನೇರವಾಗಿ ಕ್ಯಾಂಟರ್‌ ಅಡಿಗೆ ಸಿಲುಕಿದ್ದಾರೆ.

ಬಾಲಕರು ಹೆಲ್ಮೆಟ್‌ ಧರಿಸದೆ ತ್ರಿಬಲ್‌ ರೈಡಿಂಗ್‌ ಹೊರಟಿದ್ದು, ಜೀವ ಕಳೆದುಕೊಂಡಿದ್ದಾರೆ.

You may also like