Home » Viral Video: ಮಹಿಳೆಯ ಕಿವಿ ಹೊಕ್ಕ ಹಾವು – ಭಯಾನಕ ವಿಡಿಯೋ ವೈರಲ್!!

Viral Video: ಮಹಿಳೆಯ ಕಿವಿ ಹೊಕ್ಕ ಹಾವು – ಭಯಾನಕ ವಿಡಿಯೋ ವೈರಲ್!!

0 comments

Viral Video : ಕಿವಿ ಒಳಗೆ ಸಾಮಾನ್ಯವಾಗಿ ಸಣ್ಣ ಪುಟ್ಟ ಹುಳ ಉಪ್ಪಟೆಗಳು ಹೋಗುತ್ತವೆ ಅನ್ನೋದು ಗೊತ್ತಿರುವ ವಿಚಾರ. ಆದರೆ ಹಾವು ಕಿವಿಗೆ ನುಗ್ಗುವುದನ್ನು ಖಂಡಿತಾ ಕೇಳಿರುವುದಿಲ್ಲ. ಇದೀಗ ನೀವು ಅದನ್ನು ಕಣ್ಣಾರೆ ನೋಡಬಹುದು. ಯಾಕೆಂದರೆ ಮಹಿಳೆಯೊಬ್ಬರ ಕಿವಿಗೆ ಹಾವೊಂದು ತೆವಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.

ಹೌದು, ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಒಬ್ಬ ವ್ಯಕ್ತಿಯು ಇಕ್ಕಳದಿಂದ ಹಾವನ್ನು ಹೊರತೆಗೆದರೂ, ಅದು ಮತ್ತೆ ಮತ್ತೆ ಒಳಗೆ ಜಾರಿಕೊಳ್ಳುತ್ತದೆ. ಇದು ನಿಜವೋ ಅಥವಾ ನಕಲಿ ವಿಡಿಯೋ ಅನ್ನೋದು ಸ್ಪಷ್ಟವಾಗಿಲ್ಲವಾದರೂ, ಈ ವಿಡಿಯೋ ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಬೆಂಕಿ ಬಿರುಗಾಳಿ ಎಬ್ಬಿಸಿದೆ. ಈ ವೀಡಿಯೊವನ್ನು’therealtarzann’ಎಂಬ ಬಳಕೆದಾರರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ಈ ವಿಡಿಯೋವನ್ನು ಯಾವ ಪ್ರದೇಶದಿಂದ ರೆಕಾರ್ಡ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗಿಲ್ಲ. ಇದರ ಸತ್ಯಾಸತ್ಯತೆಯನ್ನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಆದರೆ, ವಿಡಿಯೋದಲ್ಲಿ ತೋರಿಸಿರುವ ದೃಶ್ಯಗಳು ಎಲ್ಲರ ಎದೆಯನ್ನು ನಡುಗಿಸುವಂತೆ ಇದೆ.

You may also like