15
Pakistan : ಭಾರತ ಆಪರೇಷನ್ ಸಿಂಧೂರ ಹೆಸರಿನಲ್ಲಿ ಭಯೋತ್ಪಾಕರ ವಿರುದ್ಧ ಕಾರ್ಯಾಚರಣೆ ನಡೆಸಿದೆ. ಭಾರತ ಈ ದಾಳಿಗೆ ಪ್ರತಿದಾಳಿ ಮಾಡಲು ಪಾಕಿಸ್ತಾನ ಮುಂದಾಗಿದ್ದು ಗುರುವಾರ ಜಮ್ಮುವಿನ ಮೇಲೆ ಕ್ಷಿಪಣಿ ದಾಳಿ ಮಾಡುವ ಪ್ರಯತ್ನ ಮಾಡಿದೆ. ಈ ವೇಳೆ ಭಾರತ ಎಂಟು ಕ್ಷಿಪಣಿಗಳನ್ನು ಹೊಡೆದು ಉರುಳಿಸಿದೆ. ಆದರೂ ಈ ಸಮಯದಲ್ಲಿ ಪಾಕ್ ಮಾಡಿದ ದಾಳಿಯಿಂದಾಗಿ ಭಾರತದ 16 ಅಮಾಯಕರು ಬಲಿಯಾಗಿದ್ದಾರೆ ಎಂದು ಕೇಂದ್ರ ಗೃಹ ಇಲಾಖೆ ತಿಳಿಸಿದೆ.
ಹೌದು, ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳ ಈ ಕುರಿತು ಮಾಹಿತಿ ನೀಡಿದ್ದು, ಭಾರತದ 12 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆಯು ದಾಳಿಗೆ ಪ್ರತ್ಯುತ್ತರ ನೀಡಿದೆ. ಪಾಕ್ ನಡೆಸಿದ ದಾಳಿಯಲ್ಲಿ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನ ನಮ್ಮ ದೇಶದ ಹಲವಡೆ ದಾಳಿಗೆ ಪ್ರಯತ್ನಿಸುತ್ತಿದ್ದಾರೆ ಎಂದಿದೆ.
