Pakistan PM: ಭಾರತೀಯ ಸೇನೆ ನಡೆಸಿದ ಮಿಸೈಲ್ ದಾಳಿಗೆ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಗಢಗಢ ನಡುಗುವಂತಾಗಿದೆ. ಯಾಕೆಂದರೆ ಭಾರತದ ಸೇನೆಯು ಪಾಕಿಸ್ತಾನದ ಪ್ರಧಾನಿ ನಿವಾಸದ ಬಳಿ ಸ್ಪೋಟವನ್ನು ನಡೆಸಿದೆ. ಹೀಗಾಗಿ ಪಾಕ್ ಪ್ರಧಾನಿ ಬಿಲ ಸೇರಿದ್ದಾರೆ.
ಹೌದು, ಭಾರಿ ಭದ್ರತೆಯೊಂದಿಗೆ ಬೆಚ್ಚಗೆ ನಿವಾಸದೊಳಗೆ ಕುಳಿತು ಪಾಕಿಸ್ತಾನ ಸೇನೆ ಸೇರಿದಂತೆ ಇತರ ಎಜೆನ್ಸಿಗಳಿಗೆ ಸೂಚನೆ ನೀಡುತ್ತಿದ್ದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್ ಹಾಗೂ ಸೇನಾ ಮುಖ್ಯಸ್ಥ ಅಸೀಮ್ ಮುನೀರ್ ನಿವಾಸದ ಬಳಿಯೇ ಸ್ಫೋಟವಾಗಿದೆ ಎಂದು ಕೆಲ ಮಾಧ್ಯಮಗಳು ವರದಿ ಮಾಡಿದೆ. ಯಸ್, ಮನೆಗೆ 20 ಕಿಮೀ ದೂರದಲ್ಲೇ ಸ್ಫೋಟವಾಗಿದೆ ಎನ್ನಲಾಗಿದೆ. ಹೀಗಾಗಿ ಭಾರತದ ಅಬ್ಬರಕ್ಕೆ ಹೆದರಿದೆ ಪಾಕ್ ಪ್ರಧಾನಿ (Pakistan Prime Minister) ಇದೀಗ ರಹಸ್ಯ ತಾಣ ಸೇರಿದ್ದಾರೆ ಎಂಬ ಬ್ರೇಕಿಂಗ್ ನ್ಯೂಸ್ ಲಭ್ಯವಾಗಿದೆ.
ಇನ್ನು ಭಾರತದ ದಾಳಿಗೆ ಪಾಕ್ ಪ್ರಧಾನಿಯೂ ಬೆಚ್ಚಿದ್ದಾರೆ. ಪಾಕಿಸ್ತಾನದಲ್ಲಿ ದಿಕ್ಕು ತೋಚದ ಪರಿಸ್ಥಿತಿ ನಿರ್ಮಾಣವಾಗಿದೆ. ದೇಶದ ಹಲವು ನಗರಗಳು ಕತ್ತಲಲ್ಲಿ ಸಿಲುಕಿವೆ. ಕೆಲವು ನಗರಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ. ಪಾಕ್ ನಾಗರಿಕರಿಗೆ ಅಲ್ಲಿನ ಸ್ಥಳೀಯ ಆಡಳಿತಗಳಿಂದ ಸೂಚನೆ ನೀಡಿದೆ. ಪಾಕಿಸ್ತಾನದ ಪೈಲಟ್ ನನ್ನು ಭಾರತೀಯ ಸೇನೆ ವಶಕ್ಕೆ ಪಡೆದಿದೆ.
