Home » Canara Bank: ಕೆನರಾ ಬ್ಯಾಂಕ್‌ನ ನಿವ್ವಳ ಲಾಭ 5 ಸಾವಿರ ಕೋಟಿ ರೂಗೆ ಏರಿಕೆ!

Canara Bank: ಕೆನರಾ ಬ್ಯಾಂಕ್‌ನ ನಿವ್ವಳ ಲಾಭ 5 ಸಾವಿರ ಕೋಟಿ ರೂಗೆ ಏರಿಕೆ!

0 comments
Canara Bank

Canara Bank: ಕೆನರಾ ಬ್ಯಾಂಕಿನ ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದ ಆರ್ಥಿಕ ವರದಿಯಂತೆ ನಿವ್ವಳ ಲಾಭದಲ್ಲಿ ಶೇ.33.19 ರಷ್ಟು ಏರಿಕೆ ಕಂಡಿದ್ದು 5,005 ಕೋಟಿ ರು.ಗೆ ಏರಿಕೆಯಾಗಿದೆ. ಕಾರ್ಯಾಚರಣೆ ಲಾಭ ಶೇ.12.14ರಷ್ಟು ಬೆಳ ವಣಿಗೆಯಾಗಿದ್ದು8,284 ಕೋಟಿ ರು.ಗಳಿಗೆ ತಲುಪಿದೆ. ಗುರುವಾರ ಪತ್ರಿಕಾಗೋಷ್ಠಿ ಯಲ್ಲಿ ಈ ಮಾಹಿತಿ ನೀಡಿದ ಕೆನರಾ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ, ಸಿಇಒ ಕೆ.ಸತ್ಯನಾರಾಯಣ ರಾಜು, 2024ರ ಆರ್ಥಿಕ ವರ್ಷದಲ್ಲಿ ಪಾವತಿಸಿದ ಬಂಡ ವಾಳದ ಲಾಭಾಂಶ ಶೇ.161 ಕ್ಕೆ ಹೋಲಿಸಿದಾಗ ಈ ಬಾರಿ ಶೇ.200ರಷ್ಟು ಲಾಭಾಂಶ ಘೋಷಿಸಲಾಗಿದೆ ಎಂದರು. ಜಾಗತಿಕ ವ್ಯವಹಾರದಲ್ಲೂ ಶೇ.11.32ರಷ್ಟು ಬೆಳ ವಣಿಗೆಯಾಗಿದ್ದು, 25,30,215 ಕೋಟಿ ರು.ಗೆ ಏರಿಕೆಯಾಗಿದೆ. ಜಾಗತಿಕ ಠೇವಣಿ ಯಲ್ಲಿ ವರ್ಷದಿಂದ ವರ್ಷಕ್ಕೆ ಶೇ.11.01 ರಷ್ಟು ಬೆಳವಣಿಗೆಯೊಂದಿಗೆ 14,56,883 ಕೋಟಿ ರು.ಗೆ ತಲುಪಿದ್ದು ಒಟ್ಟಾರೆ ಜಾಗತಿಕ ಮುಂಗಡದಲ್ಲಿ ಶೇ.11.74ರಷ್ಟು ಬೆಳವಣಿಗೆಯೊಂದಿಗೆ 10,73,332 ಕೋಟಿ ರೂ. ಗೆ ತಲುಪಿದೆ ಎಂದರು.

You may also like