Home » Udupi: ಕಾರ್ಕಳದಲ್ಲಿ ಸ್ಪೋಟಕ: ವ್ಯಕ್ತಿ ಗಂಭೀರ!

Udupi: ಕಾರ್ಕಳದಲ್ಲಿ ಸ್ಪೋಟಕ: ವ್ಯಕ್ತಿ ಗಂಭೀರ!

0 comments

Udupi: ಕಾರ್ಕಳ ತಾಲೂಕು ನಂದಳಿಕೆಯಲ್ಲಿ ಕಲ್ಲುಕೋರೆಯಲ್ಲಿ ಸ್ಪೋಟಕ ಸಿಡಿದು ವ್ಯಕ್ತಿಯೋರ್ವರು ಗಾಯಗೊಂಡ ಘಟನೆ ಮೇ. 8ರಂದು ನಡೆದಿದೆ.

ರಾಯಚೂರಿನ ಶಿವರಾಜ (27) ಎಂಬುವವರು ಕಾರ್ಕಳ ತಾಲೂಕು ನಂದಳಿಕೆ ಗ್ರಾಮದಲ್ಲಿರುವ ಫ್ರಾನ್ಸಿಸ್ ಡಿಸೋಜ ಎಂಬವರ ಕಲ್ಲುಕೋರೆಯಲ್ಲಿ ಕೆಲಸ ಮಾಡುತ್ತಿದ್ದು, ಮೇ.8ರಂದು ಶಿವರಾಜ್ ಮತ್ತು ಅವರ ಜೊತೆಯಲ್ಲಿದ್ದವರು ಕಂಪ್ರೆಸರ್ ಮೂಲಕ ಕಲ್ಲುಕೋರೆಯಲ್ಲಿ ಸಿಡಿಮದ್ದು ಸಿಡಿಸಲು ಡ್ರಿಲಿಂಗ್ ಮಾಡಿ ನಂತರ ಕಲ್ಲುಕೋರೆಯ ಹೊರಗೆ ಬಂದು ಕಂಪ್ರೆಸರ್ ಬಳಿ ಕುಳಿತಿರುವಾಗ ಕಲ್ಲು ಸಿಡಿಸಲು ಇಟ್ಟಿದ್ದ ಸ್ಪೋಟಕ ಸಿಡಿದು ಕಲ್ಲೊಂದು ವೇಗವಾಗಿ ಬಂದು ಕಂಪ್ರೆಸರ್‌ಗೆ ಬಡಿದು ಕಲ್ಲು ಶಿವರಾಜ್‌ರವರ ತಲೆಯ ಎಡಬದಿಗೆ ತಗುಲಿ ಗಂಭೀರವಾದ ಗಾಯವಾಗಿರುತ್ತದೆ.

ಕಲ್ಲು ಕೋರೆಯ ಮಾಲಿಕರಾದ ಪ್ರಾನ್ಸಿಸ್ ಡಿ’ಸೋಜ ಮತ್ತು ಸ್ಪೋಟಕ ಸಿಡಿಸಿದ ಜೋಸೆಫ್ ರಿಚರ್ಡ್ ಡಿಸೋಜ ಎಂಬವರು ಸೂಕ್ತ ಮುಂಜಾಗೃತಾ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯತನದಿಂದ ಸ್ಪೋಟಕ ಸಿಡಿಸಿದ್ದರಿಂದ ಶಿವರಾಜ್‌ರವರಿಗೆ ತಲೆಗೆ ಮಾರಣಾಂತಿಕ ಗಾಯವಾಗಿರುವುದಾಗಿ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.

You may also like