Home » Viral Video : ಡಿವೋರ್ಸ್ ಕೇಳಿದ ಪತ್ನಿ – ಕೋರ್ಟ್ ನಲ್ಲಿ ಹಾಡು ಹಾಡಿ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

Viral Video : ಡಿವೋರ್ಸ್ ಕೇಳಿದ ಪತ್ನಿ – ಕೋರ್ಟ್ ನಲ್ಲಿ ಹಾಡು ಹಾಡಿ ಮನವೊಲಿಸಿದ ಪತಿರಾಯ, ವಿಡಿಯೋ ವೈರಲ್

0 comments

Viral Video : ದಿನ ಬೆಳಗಾದರೆ ಸಾಕು ಡೈವೋರ್ಸ್ ಪ್ರಕರಣಗಳು ಯಥೇಚ್ಛವಾಗಿ ಹೆಚ್ಚಾಗುತ್ತಿದೆ. ನೂರು ಕಾಲ ಕೂಡಿ ಬಾಳಬೇಕಾದ ಸಂಸಾರಗಳು ಮದುವೆಯಾದ ಕೆಲವೇ ವರ್ಷಗಳಲ್ಲಿ ಒಡೆದು ಹೋಗುತ್ತಿವೆ. ಅದೇ ರೀತಿ ಇಲ್ಲೊಂದು ವಿಚಿತ್ರ ಡಿವರ್ಸ್ ಪ್ರಕರಣ ಬೆಳಕಿಗೆ ಬಂದಿದ್ದು, ಸ್ವಾರಸ್ಯಕರ ಘಟನೆಯ ಮೂಲಕ ಗಂಡ ಹೆಂಡತಿ ಮತ್ತೆ ಒಂದಾಗಿರುವ ವಿದ್ಯಮಾನ ನಡೆದಿದೆ.

ಹೌದು, ಇಲ್ಲೊಬ್ಬ ಪತಿರಾಯ ಡಿವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿದ್ದ ಪತ್ನಿಯನ್ನು ಮನವೊಲಿಸಲು ಒಂದೊಳ್ಳೆ ಪ್ಲ್ಯಾನ್ ಮಾಡಿಕೊಂಡಿದ್ದಾನೆ. ಪತ್ನಿ ಮುಂದೆ ಹಾಡು (song) ಹಾಡಿ ಆಕೆಯ ಮತ್ತೆ ಪ್ರೀತಿಯಲ್ಲಿ ಬೀಳುವಂತೆ ಮಾಡಿದ್ದಾನೆ. ಈ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಅಂದಹಾಗೆ @Vishalmalvi ಹೆಸರಿನ ಖಾತೆ ಯಲ್ಲಿ ಈ ವಿಡಿಯೋವನ್ನು ಶೇರ್ ಮಾಡಿಕೊಳ್ಳಲಾಗಿದ್ದು, ಈ ವಿಡಿಯೋದಲ್ಲಿ ದಂಪತಿಗಳಿಬ್ಬರೂ ಡಿವೋರ್ಸ್ ಪಡೆಯಲು ಕೋರ್ಟ್ ಮೆಟ್ಟಿಲೇರಿರುವುದು ನೋಡಬಹುದು. ಈ ವೇಳೆಯಲ್ಲಿ ಪತಿಯೂ ನಾ ಸಿಖಾ ತೇರೆ ಬಿನ್ ಜೀನಾ ಹಿಂದಿ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದು. ಹಾಡು ಕೇಳಿ ಪತ್ನಿಯೂ ಭಾವುಕಳಾಗಿದ್ದು, ಪತಿಯನ್ನು ತಬ್ಬಿಕೊಂಡಿದ್ದಾಳೆ.

ಅಲ್ಲದೆ ತನ್ನ ನಿರ್ಧಾರವನ್ನು ಬದಲಾಯಿಸಿದ್ದು, ಜೊತೆಗೆ ಬದುಕಲು ಮುಂದಾಗಿದ್ದಾಳೆ. ಈ ವಿಡಿಯೋವೊಂದು 1.4 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದ್ದು ನೆಟ್ಟಿಗರು ತರಹೇವಾರಿ ಕಾಮೆಂಟ್ ಗಳನ್ನು ಮಾಡಿದ್ದಾರೆ.

You may also like