Home » Dinesh Gundu Rao: ಕೊಲೆಗಳು ಆಗುತ್ತಲೇ ಇರುತ್ತವೆ; ಎಲ್ಲರ ಮನೆಗೆ ಹೋಗಬೇಕಿಲ್ಲ-ದಿನೇಶ್‌ ಗುಂಡೂರಾವ್‌

Dinesh Gundu Rao: ಕೊಲೆಗಳು ಆಗುತ್ತಲೇ ಇರುತ್ತವೆ; ಎಲ್ಲರ ಮನೆಗೆ ಹೋಗಬೇಕಿಲ್ಲ-ದಿನೇಶ್‌ ಗುಂಡೂರಾವ್‌

0 comments

Dinesh Gundu Rao: ಹಿಂದುತ್ವ ಪರ ಕಾರ್ಯರ್ತ, ರೌಡಿಶೀಟರ್‌ ಸುಹಾಸ್‌ ಶೆಟ್ಟಿ ಮನೆಗೆ ಸಚಿವರು ಭೇಟಿ ನೀಡಿಲ್ಲ ಎಂಬ ಬಿಜೆಪಿಯವರ ಆರೋಪಕ್ಕೆ, ದಿನೇಶ್‌ ಗುಂಡುರಾವ್‌ ಅವರು, ಕೊಲೆಗಳು ಆಗುತ್ತಲೇ ಇರುತ್ತವೆ. ಕೊಲೆಯಾದ ಪ್ರತಿಯೊಬ್ಬರ ಮನೆಗೆ ಸಚಿವರು ಹೋಗಲೇಬೇಕು ಎಂಬುದೇನೂ ಇಲ್ಲ. ಕೊಲೆ ಏಕೆ ಆಗಿದೆ ಎನ್ನುವುದೂ ಮುಖ್ಯವಾಗುತ್ತದೆʼ ಎಂದು ಜಿಲ್ಲಾ ಉಸ್ತುವಾರಿ ಸಚಿವ ಗುಂಡೂರಾವ್‌ ಅವರು ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ʼ ಸುಹಾಸ್‌ ಶೆಟ್ಟಿ ಕೊಲೆ ಏಕೆ ಆಗಿದೆ ಎಂಬುದನ್ನು ತಿಳಿದುಕೊಂಡಿರುವ ಸರಕಾರ, ತಪ್ಪಿತಸ್ಥರನ್ನು ಬಂಧಿಸುವ ಮೂಲಕ ತನ್ನ ಜವಾಬ್ದಾರಿ ನಿರ್ವಹಿಸಿದೆ. ಯಾರಿಗೂ ರಕ್ಷಣೆ ಕೊಡುವ ಪ್ರಶ್ನೆಯೇ ಇಲ್ಲ. ಕೊಲೆ ಯಾರು ಮಾಡಿದ್ದಾರೆ ಅವರ ಬಂಧನ ಆಗಿದೆ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತಿದೆ. ಎನ್‌ಐಎ ಗೆ ಪ್ರಕರಣ ತನಿಖೆ ವಹಿಸಬೇಕು ಎಂಬ ಬಿಜೆಪಿಯ ಆರೋಪಗಳಿಗೆ ಉತ್ತರವಿಲ್ಲ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎರಡು ಹತ್ಯೆ ನಡೆದ ನಂತರ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವವರ ವಿರುದ್ಧ ಪೊಲೀಸರು ಕ್ರಮ ಕೈಗೊಳ್ಳುತ್ತಿದ್ದಾರೆ. ನಕಲಿ ಖಾತೆ ಕೆಲವರು ಬಳಸುತ್ತಿದ್ದು, ಅವರು ಯಾರು ಎನ್ನುವುದು ತಕ್ಷಣಕ್ಕೆ ಗೊತ್ತಾಗುವುದಿಲ್ಲʼ ಎಂದು ಹೇಳಿದರು.

You may also like