Home » Kashmir: ಕದನ ವಿರಾಮ ಘೋಷಣೆಯಾದರು ಜಮ್ಮು-ಶ್ರೀನಗರದಲ್ಲಿ ಪಾಕ್​ನಿಂದ ಮತ್ತೆ ಡ್ರೋನ್​, ಗುಂಡಿನ ದಾಳಿ!

Kashmir: ಕದನ ವಿರಾಮ ಘೋಷಣೆಯಾದರು ಜಮ್ಮು-ಶ್ರೀನಗರದಲ್ಲಿ ಪಾಕ್​ನಿಂದ ಮತ್ತೆ ಡ್ರೋನ್​, ಗುಂಡಿನ ದಾಳಿ!

0 comments

Kashmir : ಭಾರತ ಮತ್ತು ಪಾಕಿಸ್ತಾನದ ನಡುವೆ ಮಧ್ಯಸ್ಥಿಕೆ ವಹಿಸಿ ಅಮೆರಿಕವು ಕದನ ವಿರಾಮ ಘೋಷಣೆ ಮಾಡಿದೆ. ಭಾರತ ಸೇನೆಯು ಕೂಡ ಇದನ್ನು ಅಧಿಕೃತವಾಗಿ ತಿಳಿಸಿದೆ. ಆದರೆ ಕದನ ವಿರಾಮ ಘೋಷಣೆಯಾದರೂ ಕೂಡ ಪಾಕಿಸ್ತಾನ ತನ್ನ ನರಿ ಬುದ್ಧಿ ತೋರಿಸಿದ್ದು, ಕಾಶ್ಮೀರದ ಶ್ರೀನಗರದಲ್ಲಿ ಪಾಕ್ ನಿಂದ ಮತ್ತೆ ಡ್ರೋನ್ ಮತ್ತು ಗುಂಡಿನ ದಾಳಿ ನಡೆಸಿದೆ.

ಹೌದು, ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎರಡು ದೇಶಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿವೆ ಎಂದು ಹೇಳಿಕೊಂಡ ಕೆಲವೇ ಗಂಟೆಗಳ ಬಳಿಕ ಜಮ್ಮು ಮತ್ತು ಶ್ರೀನಗರದಲ್ಲಿ ಪಾಕಿಸ್ತಾನ ಮತ್ತೆ ಡ್ರೋನ್​ ಹಾಗೂ ಗುಂಡಿನ ದಾಳಿ ನಡೆಸಿದೆ ಎಂದು ವರದಿಯಾಗಿದೆ.

ಅಖ್ನೂರ್, ರಾಜೌರಿ , ಆರ್‌ಎಸ್ ಪುರ, ಉದಮ್‌ಪುರ್ ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಶೆಲ್ ದಾಳಿ ನಡೆಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ 11 ಸ್ಥಳಗಳಲ್ಲಿ ಪಾಕ್‌ ಡ್ರೋನ್‌ ದಾಳಿ ನಡೆದಿದೆ. ಬಾರಾಮುಲ್ಲಾದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ*ಗಳು ಸಂಭವಿಸಿರುವುದು ವರದಿಯಾಗಿವೆ. ಶ್ರೀನಗರ ಮಾತ್ರವಲ್ಲದೆ ಗುಜರಾತ್‌ನ ಕಛ್‌, ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಪಾಕ್‌ ಡ್ರೋನ್‌ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಪಾಕಿಸ್ತಾನದ ಹಲವು ಡ್ರೋನ್‌ ಗಳನ್ನು ಭಾರತೀಯ ಸೇನೆ ಹೊಡೆದುರುಳಿಸಿದೆ. ರಾಜಸ್ಥಾನದ ಪೋಖ್ರಾನ್ ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಡ್ರೋನ್ ನ್ನು ಹೊಡೆದುರುಳಿಸಲಾಗಿದೆ. ಪಾಕ್‌ ಹುಚ್ಚುತನಕ್ಕೆ ತಕ್ಕ ಪ್ರತ್ಯುತ್ತರ ನೀಡುವಂತೆ ಸರ್ಕಾರ ಸೇನೆಗೆ (ಬಿಎಸ್‌ಎಫ್) ಸೂಚನೆ ನೀಡಿದೆ.

ಅಖ್ನೂರ್, ರಾಜೌರಿ , ಆರ್‌ಎಸ್ ಪುರ, ಉದಮ್‌ಪುರ್ ವಲಯಗಳಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ಥಾನ ಶೆಲ್ ದಾಳಿ ನಡೆಸಿದೆ ಎನ್ನಲಾಗಿದೆ. ವರದಿಗಳ ಪ್ರಕಾರ 11 ಸ್ಥಳಗಳಲ್ಲಿ ಪಾಕ್‌ ಡ್ರೋನ್‌ ದಾಳಿ ನಡೆದಿದೆ.

ಬಾರಾಮುಲ್ಲಾದಲ್ಲಿ ಭಾರೀ ಪ್ರಮಾಣದಲ್ಲಿ ಸ್ಫೋಟ*ಗಳು ಸಂಭವಿಸಿರುವುದು ವರದಿಯಾಗಿವೆ. ಶ್ರೀನಗರ ಮಾತ್ರವಲ್ಲದೆ ಗುಜರಾತ್‌ನ ಕಛ್‌, ರಾಜಸ್ಥಾನದ ಕೆಲ ಪ್ರದೇಶಗಳಲ್ಲಿ ಪಾಕ್‌ ಡ್ರೋನ್‌ ದಾಳಿ ನಡೆಸಿರುವ ಬಗ್ಗೆ ವರದಿಯಾಗಿದೆ.

ಈ ಕುರಿತು ಜಮ್ಮು-ಕಾಶ್ಮೀರ ಸಿಎಂ ಒಮರ್ ಅಬ್ದುಲ್ಲಾ ತಮ್ಮ ಎಕ್ಸ್​ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ‘ಕದನ ವಿರಾಮಕ್ಕೆ ಈಗ ಏನಾಯಿತು? ಶ್ರೀನಗರದಾದ್ಯಂತ ಸ್ಫೋಟಗಳ ಶಬ್ದ ಕೇಳಿಬಂದಿದೆ!!!’ ಎಂದು ಒಮರ್ ಅಬ್ದುಲ್ಲಾ ಬರೆದಿದ್ದಾರೆ.

You may also like