Home » ಕಾಮನ್ಸೆನ್ಸ್ ಪಾಠ ಮಾಡಿದ ಟ್ರಂಪ್ ಗೆ ಅವಮಾನ: ಕದನ ವಿರಾಮ ಉಲ್ಲಂಘಿಸಿ200 ಡ್ರೋನ್ ದಾಳಿ

ಕಾಮನ್ಸೆನ್ಸ್ ಪಾಠ ಮಾಡಿದ ಟ್ರಂಪ್ ಗೆ ಅವಮಾನ: ಕದನ ವಿರಾಮ ಉಲ್ಲಂಘಿಸಿ200 ಡ್ರೋನ್ ದಾಳಿ

0 comments

New delhi: ಉಗ್ರರನ್ನು ಸಾಕುತ್ತಿರುವ ಪಾಕಿಸ್ತಾನ ಮಂಡಿಯೂರಿ ಭಾರತಕ್ಕೆ ಕದನ ವಿರಾಮಕ್ಕಾಗಿ ಬೇಡಿಕೊಂಡ ಕೆಲವೇ ಗಂಟೆಗಳಲ್ಲಿ ಕದನ ವಿರಾಮ ಉಲ್ಲಂಘನೆ ಮಾಡಿದೆ. ಪಾಕ್ ಸರ್ಕಾರ ಭಾರತದ ಜೊತೆ ಕದನವಿರಾಮ ಘೋಷಿಸಿದ್ರೆ, ಪಾಕ್ ಸೇನೆ ಮಾತ್ರ, ಭಾರತದ ವಿರುದ್ಧ ದಾಳಿಗೆ ಯತ್ನಿಸುತ್ತಿದೆ. ಇದನ್ನು ಗಮನಿಸಿದರೆ ಪಾಕ್ ಸರ್ಕಾರಕ್ಕೆ, ಪಾಕ್​ ಸೇನೆ ಮಧ್ಯೆ ಏನೇನೂ ಇಲ್ವಾ ಎಂಬ ಪ್ರಶ್ನೆ ಹುಟ್ಟಿದೆ.

ಕದನ ವಿರಾಮ ಉಲ್ಲಂಘಿಸಿದ ಪಾಕಿಸ್ತಾನ ಅಮೆರಿಕಕ್ಕೇ ಅವಮಾನ ಮಾಡಿದೆ. ಅಮೆರಿಕಾ ಅಧ್ಯಕ್ಷ ಟ್ರಂಪ್ ರ ಕಾಲು ಹಿಡಿದು, ಪಾಕಿಸ್ತಾನ ಸರ್ಕಾರ ಟ್ರಂಪ್ ಮೂಲಕ ಭಾರತವನ್ನು ಕದನವಿರಾಮಕ್ಕೆ ಒಪ್ಪಿಸಿತ್ತು. ಪಾಕಿಸ್ತಾನವನ್ನು ನಂಬಿದ ಅಮೆರಿಕ ಅಧ್ಯಕ್ಷ ಟ್ರಂಪ್ ದೊಡ್ಡಣ್ಣನoತೆ ಟ್ವೀಟ್ ಮಾಡಿ ಭಾರತ ಮತ್ತು ಪಾಕಿಗೆ ಕಾಮನ್​ಸೆನ್ಸ್ ಪಾಠ ಮಾಡಿತ್ತು. ಭಾರತ ಮತ್ತು ಪಾಕ್ ಕದನ ವಿರಾಮ ಮಾಡಿದ್ದೇನೆ ಎಂದು ಟ್ರಂಪ್ ಟ್ವೀಟಿಸಿದ್ದರು. ಈಗ ಟ್ರಂಪ್ ನಾಚಿಕೆ ಪಟ್ಟುಕೊಳ್ಳುವ ಹಾಗಾಗಿದೆ ಎಂದು ಮಾಧ್ಯಮಗಳು ಉಲ್ಲೇಖಿಸುತ್ತಿವೆ.

ಕದನವಿರಾಮ ಬಳಿಕ 200ಕ್ಕೂ ಹೆಚ್ಚು ಡ್ರೋನ್​ಗಳನ್ನು ಹಾರಿಸಿದೆ. ಭಾರತೀಯ ಸೇನೆ ಆ ಎಲ್ಲಾ ಡ್ರೋನ್​ಗಳನ್ನು ಹೊಡೆದು ಹಾಕಿದೆ. ಜಮ್ಮು ಕಾಶ್ಮೀರದ ಶ್ರೀನಗರ, ಜಮ್ಮು, ಗುಜರಾತ್​ನ ಕಚ್​, ರಾಜಸ್ಥಾನದ ಹಲವು ಕಡೆ ಡ್ರೋನ್​ ದಾಳಿಗೆ ಯತ್ನಿಸಿತ್ತು.

ಪಾಕಿಸ್ತಾನದಲ್ಲಿ ಸೇನೆಯ ಕೃಪಾಕಟಾಕ್ಷ ಇದ್ದರೆ ಮಾತ್ರ ಯಾವುದೇ ಸರ್ಕಾರ. ಸದ್ಯದ ಶಹಬಾಜ್ ಷರೀಫ್​ ಸರ್ಕಾರವೂ ಸೇನೆಯ ಕೃಪೆಯಿಂದಲೇ ಅಧಿಕಾರಕ್ಕೆ ಬಂದಿದೆ. ಇದೀಗ ಶಹಬಾಜ್ ಷರೀಫ್​ ಸರ್ಕಾರ ಮತ್ತು ಸೇನಾಮುಖ್ಯಸ್ಥ ಅಸೀಮ್ ಮುನೀರ್ ಮಧ್ಯೆ ತಿಕ್ಕಾಟ ಶುರುವಾಗಿದೆ ಎನ್ನಲಾಗಿದೆ.

You may also like