6
Brahmos Facility: ಇಂದು ಲಕ್ನೋದಲ್ಲಿ ಬ್ರಹ್ಮೋಸ್ ಸೌಲಭ್ಯವು ಉದ್ಘಾಟನೆಗೊಳ್ಳಲಿದ್ದು, ವರ್ಷದಲ್ಲಿ 100 ಕ್ಷಿಪಣಿಗಳನ್ನು ಉತ್ಪಾದಲಿಸದೆ. ಇದರ ಉದ್ಘಾಟನೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಭಾನುವಾರ ಲಕ್ನೋದಲ್ಲಿ ಬ್ರಹ್ಮೋಸ್ ಕ್ಷಿಪಣಿ ಉತ್ಪಾದನಾ ಸೌಲಭ್ಯವನ್ನು ಉದ್ಘಾಟನೆ ಮಾಡಲಿದ್ದಾರೆ. ಉದ್ಘಾಟನಾ ಸಮಾರಂಭವು ವರ್ಚುವಲ್ ಆಗಿ ನಡೆಯಲಿದೆ ಎಂದು ರಕ್ಷಣಾ ಸಚಿವರು ಹೇಳಿದ್ದಾರೆ.
ಈ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಯು 290-400 ಕಿ.ಮೀ. ವರೆಗೆ ಹೊಡೆಯುವ ಸಾಮರ್ಥ್ಯವನ್ನು ʼಬ್ರಹ್ಮೋಸ್ʼ ಕ್ಷಿಪಣಿ ಹೊಂದಿದೆ. ಇದರ ವೇಗ Mach 2.8, ಅಂದರೆ ಇದು ಧ್ವನಿಯ ವೇಗಕ್ಕಿಂತ ಮೂರು ಪಟ್ಟು ವೇಗವಾಗಿರುತ್ತದೆ. ಇದನ್ನು ನೆಲ, ಗಾಳಿ, ಸಮುದ್ರದಿಂದ ಹಾರಿಸಬಹುದು. ʼಫೈರ್ ಅಂಡ್ ಫರ್ಗೆಟ್ʼ ತಂತ್ರಜ್ಞಾನದಿಂದ ಸಜ್ಜುಗೊಂಡಿರುವ ಈ ಕ್ಷಿಪಣಿಯನ್ನು ಶತ್ರುಗಳ ರಾಡಾರ್ಗಳು ಪತ್ತೆ ಮಾಡಲು ಸಾಧ್ಯವಿಲ್ಲ.
