5
Actor Vishal: ಖ್ಯಾತ ನಟ ವಿಶಾಲ್ ವೇದಿಕೆಯಲ್ಲಿರುವಾಗ ಕುಸಿದು ಬಿದ್ದ ಘಟನೆ ನಡೆದಿದೆ. ಈ ಬೆಳವಣಿಗೆ ಅಭಿಮಾನಿಗಳ ಚಿಂತೆಗೆ ಕಾರಣವಾಗಿದೆ.
ಕಾಲಿವುಡ್ ನಟ ವಿಶಾಲ್ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿರುವ ಕುರಿತು ವರದಿಯಾಗಿದೆ.
ಭಾನುವಾರ (ಮೇ 11) ರಂದು ನಟ ವಿಶಾಲ್ ತಮಿಳುನಾಡಿನ ವಿಲ್ಲುಪುರಂನಲ್ಲಿ ನಡೆದ ಪ್ರಸಿದ್ಧ ʼಮಿಸ್ ಕುವಾಗಮ್ 2025′ ರ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ಅಪಾರ ಸಂಖ್ಯೆಯ ಜನರು ನೆರೆದಿದ್ದರು. ಇದ್ದಕ್ಕಿದ್ದಂತೆ ವಿಶಾಲ್ ಕುಸಿದು ಬಿದ್ದಿದ್ದಾರೆ. ವೇದಿಕೆಯಲ್ಲಿ ಬಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ತುರ್ತು ಚಿಕಿತ್ಸೆ ಪಡೆದ ಬಳಿಕ ವಿಶಾಲ್ ಆರೋಗ್ಯದಲ್ಲಿ ಚೇತರಿಕೆ ಕಂಡು ಬಂದಿದೆ ಎನ್ನಲಾಗಿದೆ. ಆಸ್ಪತ್ರೆಯ ಅಧಿಕೃತ ಹೇಳಿಕೆ ಇನ್ನಷ್ಟೇ ಬಿಡುಗಡೆ ಆಗಬೇಕಿದೆ.
