Donald Trump : ಪಾಕಿಸ್ತಾನದ ನೀಚ ಬುದ್ಧಿಗೆ ತಕ್ಕ ಪಾಠ ಕಲಿಸಲು ಭಾರತ ಇನ್ನೇನು ಪಾಕಿಸ್ತಾನದ ಮೇಲೆ ಯುದ್ಧ ಮಾಡಲು ತುದಿಗಾಲಿನಲ್ಲಿ ನಿಂತಿತ್ತು. ವಿಶ್ವದಾದ್ಯಂತ ಪಾಕಿಸ್ತಾನ ಮತ್ತು ಭಾರತದ ನಡುವೆ ಯುದ್ಧ ಆರಂಭ ಆಗೇತಿರುತ್ತದೆ ಎಂದು ವಿಶ್ಲೇಷಿಸಲಾಗುತ್ತಿತ್ತು. ಆದರೆ ಈ ನಡುವೆ ಅಮೆರಿಕ ಮಧ್ಯಸ್ಥಿಕೆ ವಹಿಸಿ ಎರಡು ರಾಷ್ಟ್ರಗಳು ಕದನ ವಿರಾಮ ಘೋಷಿಸುವಂತೆ ಮಾಡಿತ್ತು.
ಹೌದು, ಪಾಕಿಸ್ತಾನ ತನ್ನ ನರಿ ಬುದ್ಧಿಯಿಂದ ಸಂಕಷ್ಟಕ್ಕೆ ಸಿಲುಕಿ ಬಳಿಕ ಅಮೆರಿಕ ಅಧ್ಯಕ್ಷರ ಕಾಲ ಬುಡಕ್ಕೆ ಹೋಗಿ ಬಿದ್ದಿತ್ತು. ಬಳಿಕ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು, ಮಧ್ಯಸ್ಥಿಕೆ ವಹಿಸಿ ಈ ಒಂದು ಪಾಕಿಸ್ತಾನ ಮತ್ತು ಭಾರತದ ನಡುವೆ ಕದನ ವಿರಾಮ ಘೋಷಿಸಲು ಕಾರಣಿಕರ್ತರಾಗಿದ್ದಾರೆ. ಇದರ ಬೆನ್ನಲ್ಲೇ ಟ್ರಂಪ್ ಅವರು ಈ ವಿಚಾರದ ಕುರಿತು ಕ್ರೆಡಿಟ್ ತಗೊಂಡಿದ್ದು, ಏಕೆ ಕದನ ವಿರಾಮವನ್ನು ಘೋಷಿಸಲಾಯಿತು ಎಂದು ತಿಳಿಸಿದ್ದಾರೆ. ಇದರಿಂದಾಗಿ ಅಮೆರಿಕಾದ ಈ ವಿಷಯಕ್ಕೆ ಹೆದರಿ ಭಾರತ ಕದನ ವಿರಾಮ ಘೋಷಿಸಿತೇ? ಎಂಬ ಪ್ರಶ್ನೆ ಮೂಡಿದೆ.
ಹೌದು ಭಾರತ ಮತ್ತು ಪಾಕಿಸ್ತಾನದ ನಡುವೆ ಕದನ ವಿರಾಮ ಘೋಷಿಸುವಲ್ಲಿ ಡೊನಾಲ್ಡ್ ಟ್ರಂಪ್ ಕೂಡ ಮಹತ್ವದ ಪಾತ್ರವಹಿಸಿದ್ದರು ಎನ್ನಲಾಗುತ್ತಿದೆ. ಇದೀಗ ಡೊನಾಲ್ಡ್ ಟ್ರಂಪ್ ಮತ್ತೆ ಕದನ ವಿರಾಮದ ಕ್ರೆಡಿಟ್ ತೆಗೆದುಕೊಂಡಿದ್ದಾರೆ. ಪರಮಾಣು ಸಂಘರ್ಷವನ್ನು ನಾವು ತಡೆದಿದ್ದೇವೆ. ಅಕಸ್ಮಾತ್ ಕದನ ಮುಂದುವರಿಸಿದರೆ, ವ್ಯಾಪಾರ ಬಂದ್ ಮಾಡಲಾಗುತ್ತೆ ಅಂತ ಹೇಳಿದ್ದೆ. ಎರಡು ದೇಶಗಳ ಜೊತೆಗೆ ವ್ಯಾಪಾರ ಮಾಡಲ್ಲ ಅಂತ ಹೇಳಿದ್ದೆ. ಕರೆ ಮಾಡಿ ಹೇಳಿದ್ದಕ್ಕೆ ಇದೀಗ ಎರಡು ದೇಶಗಳು ಕದನ ವಿರಾಮ ಘೋಷಿಸಿವೆ’ ಎಂದು ಟ್ರಂಪ್ ಹೇಳಿದ್ದಾರೆ.
ಅಲ್ಲದೆ ಭಾರತ ಮತ್ತು ಪಾಕಿಸ್ತಾನದ ನಡುವೆ ಪರಮಾಣು ಯುದ್ಧ ತಡೆದಿದ್ದೇವೆ. ಪರಮಾಣು ಯುದ್ಧ ಏನಾದರು ಆಗಿದ್ದರೆ ಲಕ್ಷಾಂತರ ಜನರ ಸಾವು ಆಗುತ್ತಿತ್ತು. ನಾವು ಈ ಎಲ್ಲಾ ಅಪಾಯಕಾರಿ ಯುದ್ಧವನ್ನು ತಡೆದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.
ಆದರೆ ಈ ಬೆನ್ನಲ್ಲೇ ನರೇಂದ್ರ ಮೋದಿಯವರು ನಮ್ಮ ಮಧ್ಯೆ ಯಾರು ಮಧ್ಯಸ್ಥಿಕೆ ವಹಿಸುವುದು ಬೇಡ, ಅಮೆರಿಕ ನಮ್ಮ ನಡುವೆ ಬಂದು ಹೆಸರು ಗಳಿಸುವುದು ಬೇಡ, ಪಾಕಿಸ್ತಾನಕ್ಕೆ ಹೇಗೆ ಪಾಠ ಕಲಿಸಬೇಕು ಎಂದು ನಮಗೆ ಸರಿಯಾಗಿ ತಿಳಿದಿದೆ ಎಂದು ವಿಶ್ವದ ದೊಡ್ಡಣ್ಣನಿಗೆ ಟಾಂಟ್ ನೀಡಿದ್ದಾರೆ.
