Rakesh Poojary: ಇಡೀ ಕನ್ನಡ ನಾಡಿನ ಜನತೆಯನ್ನು ಕಾಮಿಡಿ ಮೂಲಕ ನಕ್ಕು ನಲಸಿದ ಕಾಮಿಡಿ ಕಿಲಾಡಿ ಖ್ಯಾತಿಯ ರಾಕೇಶ್ ಪೂಜಾರಿ ನೆನ್ನೆ ತಾನೇ ಹೃದಯಘಾತದಿಂದ ನಮ್ಮೆಲ್ಲರನ್ನು ಅಗಲಿದ್ದಾರೆ. ಈ ವೇಳೆ ಕಾಮಿಡಿ ಕಿಲಾಡಿ ಕುಟುಂಬ ಹಾಗೂ ನಾಡಿನ ಹಿರಿಯ ಕಲಾವಿದರು ಸಂತಾಪಸೂಚಿಸಿದ್ದಾರೆ. ಅಂತೆಯೇ ರಾಕೇಶ್ ಪೂಜಾರಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ನಟಿ ರಕ್ಷಿತ ಹಾಗೂ ಖ್ಯಾತ ನಿರೂಪಕಿ ಅನುಶ್ರೀ ಅವರು ಕೂಡ ರಾಕೇಶ್ ಮನೆಗೆ ಬಂದು ಅವರ ಅಂತಿಮ ದರ್ಶನ ಪಡೆದಿದ್ದಾರೆ.
Fruits: ನಿಮ್ಮ ದೇಹವು ಯಾವಾಗಲೂ ತಾಜಾವಾಗಿಡಲು ಈ ಹಣ್ಣುಗಳನ್ನು ತಿನ್ನಿರಿ
ಈ ವೇಳೆ ಮಾಧ್ಯಮದವರ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್ ರಾಕೇಶ್ ನಿಧನ ಆಘಾತವನ್ನುಂಟುಮಾಡಿದೆ, ಆತ ಒಳ್ಳೆಯ ಹುಡುಗ ಎಂದು ಕಣ್ಣೀರಿಡುತ್ತಾ ಹೇಳಿದರು. ರಾಕೇಶ್ ತಂದೆ ಎರಡು ವರ್ಷಗಳ ಹಿಂದಷ್ಟೇ ಸಾವನ್ನಪ್ಪಿದ್ದು, ಮನೆಗೆ ರಾಕೇಶ್ ಆಧಾರವಾಗಿದ್ದ ಎಂದರು. ಅಲ್ಲದೇ ತಮ್ಮ ಜೊತೆಗಿನ ಫೋಟೊವನ್ನೇ ಈ ಹಿಂದಿನಿಂದಲೂ ಡಿಪಿ ಆಗಿ ಇಟ್ಟುಕೊಂಡಿದ್ದ, ಬೆಳಗ್ಗೆ ವಿಷಯ ತಿಳಿಯುತ್ತಿದ್ದಂತೆ ದರ್ಶನ್ ಸಹ ಕರೆ ಮಾಡಿ ವಿಷಾದ ವ್ಯಕ್ತಪಡಿಸಿದರು ಎಂದು ರಕ್ಷಿತಾ ತಿಳಿಸಿದರು.
Court: ಅಪ್ಪನ ವಿರುದ್ಧ ಕೇಸ್ ಹಾಕಿದ 8 ವರ್ಷದ ಬಾಲಕಿ; ಕೋರ್ಟ್‌ನಿಂದ ಸಿಕ್ಕಿತು 33 ಲಕ್ಷ ಪರಿಹಾರ
