Chaitra Kundapura: ನನ್ನನು ಮನೆಯ ಜಗಲಿಯಲ್ಲಿ ಬಿಟ್ಟು ಬೀಗ ಹಾಕಿ ಬಿಗ್‌ಬಾಸ್ ಮನೆಗೆ ಹೋಗಿದ್ದಾಳೆ. ನನಗೆ ಮರುದಿನ ಯೂಟ್ಯೂಬ್ ನೋಡಿ ಗೊತ್ತಾಗಿದೆ. ನಾನು ಕಟ್ಟಿದ ಮನೆಯಲ್ಲಿ ನನ್ನನ್ನು ಹೊರಗಿಟ್ಟು ಹೋಗಿದ್ದಾಳೆ. ತಂದೆಗೆ ಅನ್ನ ಹಾಕದವಳು ದೇಶ ಸೇವೆ ಏನು ಮಾಡುತ್ತಾಳೆ. ಸೈನಿಕರಿಗೆ ದುಡ್ಡು ಕೊಟ್ಟಿದ್ದಾಳೆ ಅಂತಾದರೆ ಅದು ಅವಳು ದುಡಿದ ದುಡ್ಡನ್ನು ಕೊಡಲಿ, ಇನ್ನೊಬ್ಬರ ದುಡ್ಡು ಬೇಡ. ಇದೆಂತ ದೇಶ ಸೇವೆ ಎಂದು ಚೈತ್ರಾ ತಂದೆ ಬಾಲಕೃಷ್ಣ ಅವರು ಆರೋಪ ಮಾಡಿದ್ದಾರೆ.
ನಾನು ನನ್ನ ದೊಡ್ಡ ಮಗಳು ಇಬ್ಬರು ಮರ್ಯಾದೆಯಿಂದ ಬದುಕ್ತಾ ಇದ್ದೀವಿ. ಕೋಟಿ ಕೋಟಿ ಹಣ ಪಡೆದು ನಮ್ಮ ಕುಟುಂಬದ ಮರ್ಯಾದೆ ತೆಗೆದಳು. ನನ್ನ ತಂದೆಯ ಮರ್ಯಾದೆ ತೆಗೆದಳು. ಬಿಗ್‌ಬಾಸ್ ಮನೆಗೆ ಹೋಗುವಾಗಲೂ ನನಗೆ ಹೇಳಿಲ್ಲ. ನನ್ನ ಪತ್ನಿ ನನ್ನನ್ನು ಜಗಲಿಯಲ್ಲಿ ಬಿಟ್ಟು ಮನೆಗೆ ಬೀಗ ಹಾಕಿ ಬಿಗ್‌ಬಾಸ್‌ಗೆ ಹೋದಳು. ನಾನು ಕಟ್ಟಿದ ಮನೆಗೆ ನನಗೆ ಹೋಗಲು ಅವಕಾಶವಿಲ್ಲ ಎಂದು ಕಣ್ಣೀರಿಟ್ಟು ಹೇಳಿದ್ದಾರೆ.
