9
Divya Vasantha: ಆನಂದ್ ಗುರೂಜಿ ಅವರಿಗೆ ಹಣಕ್ಕೆ ಬೇಡಿಕೆ ಇಟ್ಟು ಜೀವ ಬೆದರಿಕೆ ಹಾಗೂ ಬ್ಲ್ಯಾಕ್ ಮಾಡಿದ ಆರೋಪದಲ್ಲಿ ಕೃಷ್ಣ ಮೂರ್ತಿ ಹಾಗೂ ದಿವ್ಯಾ ವಸಂತ ಮೇಲೆ ದೂರು ದಾಖಲಾಗಿದೆ.
ಬೆಂಗಳೂರಿನ ಚಿಕ್ಕಜಾಲ ಠಾಣೆಯಲ್ಲಿ ಆನಂದ್ ಗುರೂಜಿ ದೂರು ದಾಖಲು ಮಾಡಿದ್ದಾರೆ. ಅಶ್ಲೀಲ ವೀಡಿಯೋ ಸೋಷಿಯಲ್ ಮೀಡಿಯಾದಲ್ಲಿ ಹರಿಬಿಡ್ತೀನಿ ಎಂದು ಕೃಷ್ಣಮೂರ್ತಿ ಬೆದರಿಕೆ ಹಾಕಿರುವ ಆರೋಪವಿದೆ.
ದಿವ್ಯಾ ವಸಂತ ಈಗಾಗಲೇ ಇದೇ ರೀತಿ ಬ್ಲ್ಯಾಕ್‌ಮೇಲ್ ಮಾಡಿ ಜೈಲಿಗೆ ಹೊಗಿ ಬಂದಿದ್ದಳು. ಆದರೂ ಬುದ್ಧಿ ಕಲಿಯದೆ ಮತ್ತೆ ಅದೇ ಚಾಳಿಯನ್ನು ಮುಂದುವರಿಸಿದ್ದಾರೆ ಎಂದು ಹೇಳಬಹುದು. ಬೆಂಗಳೂರಿನ ಚಿಕ್ಕಜಾಲ ಪೊಲೀಸರಿಂದ ಸದ್ಯಕ್ಕೆ ವಿಚಾರಣೆ ನಡೆಯುತ್ತಿದೆ. ಅಶ್ಲೀಲ ಪದಗಳನ್ನು ಬಳಸಿ ನಿಂದನೆ ಮಾಡಿ ಸುದಿ ಮಾಡಿದ್ದಾರೆ ಆರೋಪಿಗಳು.
ಬ್ಲ್ಯಾಕ್‌ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡಿ ಆನಂದ್ ಗುರೂಜಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ಆರೋಪಿ ನಂ.1 ಕೃಷ್ಣಮೂರ್ತಿ, ಆರೋಪಿ ನಂ.2 ದಿವ್ಯಾ ವಸಂತ್ ಆಗಿದ್ದಾರೆ.
