Home » Gruhajyoti: ಇನ್ಮುಂದೆ ಮನೆ ಬದಲಿಸಿದವರಿಗೂ ಸಿಗುತ್ತೆ ‘ಗೃಹಜ್ಯೋತಿ’- ಜಸ್ಟ್ ಹೀಗೆ ಮಾಡಿ ಸಾಕು

Gruhajyoti: ಇನ್ಮುಂದೆ ಮನೆ ಬದಲಿಸಿದವರಿಗೂ ಸಿಗುತ್ತೆ ‘ಗೃಹಜ್ಯೋತಿ’- ಜಸ್ಟ್ ಹೀಗೆ ಮಾಡಿ ಸಾಕು

0 comments

Gruhajyoti: ರಾಜ್ಯ ಸರ್ಕಾರ ತಾನು ಅಧಿಕಾರಕ್ಕೆ ಬರುವ ಹೊತ್ತಿನಲ್ಲಿ, ಚುನಾವಣಾ ಪೂರ್ವದಲ್ಲಿ ಪಂಚ ಗ್ಯಾರೆಂಟಿಗಳನ್ನು ಘೋಷಣೆ ಮಾಡಿತ್ತು. ಅಂತಗೆ ತಾನು ಮಾತು ಕೊಟ್ಟಂತೆ ಅಧಿಕಾರದ ಚುಕ್ಕಾಣಿ ಹಿಡಿದಾಗ ಅಷ್ಟು ಯೋಜನೆಗಳನ್ನು ಜಾರಿಗೆ ತಂದಿದ್ದು. ಅದರಲ್ಲಿ ‘ಗೃಹಜ್ಯೋತಿ’ ಯೋಜನೆ ಕೂಡ ಪ್ರಮುಖವಾದದ್ದು. ಈ ಯೋಜನೆಯಡಿ ಪ್ರತಿ ಮನೆಗೂ 200 ಯೂನಿಟ್ ಉಚಿತ ವಿದ್ಯುತ್ತನ್ನು ನೀಡಲು ಸರ್ಕಾರ ತೀರ್ಮಾನಿಸಿತ್ತು.

ಇನ್ನು ಜೊತೆಗೆ ಬಾಡಿಗೆ ಮನೆಯಲ್ಲಿ ಇರುವವರು ಕೂಡ ಯೋಜನೆಯ ಫಲಾನುಭವಿಗಳಾಗಿದ್ದರು. ಆರಂಭದಲ್ಲಿ ಈ ಕುರಿತು ಕೆಲವು ಸಮಸ್ಯೆಗಳಿದುರಾದರೂ ಸರ್ಕಾರ ನಂತರದಲ್ಲಿ ಅದನ್ನು ಸರಿಪಡಿಸಿ ಅವರು ಕೂಡ ಈ ಯೋಜನೆಗೆ ಅರ್ಹರೆಂದು ತಿಳಿಸಿತ್ತು. ಆದರೆ ಈಗ ಮತ್ತೊಂದು ಸಮಸ್ಯೆ ಎಂದರೆ ಮನೆ ಬದಲಿಸಿದಾಗ ಗೃಹಜೋತಿಯನ್ನು ಹೇಗೆ ಪಡೆಯುವುದು? ಅದರ ಫಲಾನುಭವಿಗಳಾಗುವುದು ಹೇಗೆ ಎಂಬುದು? ಇದೀಗ ಸರ್ಕಾರ ಈ ಸಮಸ್ಯೆಗೂ ಕೂಡ ಪರಿಹಾರವನ್ನು ಕೊಟ್ಟಿದೆ. ಹೀಗಾಗಿ ಮನೆ ಬದಲಾಯಿಸುವವರು ಜಸ್ಟ್ ಹೀಗೆ ಮಾಡಿದರೆ ಸಾಕು ನೀವು ಕೂಡ ಗೃಹ ಜ್ಯೋತಿ ಫಲಾನುಭವಿಗಳಾಗುತ್ತಿರಿ.

ಹೌದು, ರಾಜ್ಯ ಸರ್ಕಾರವು ಬಾಡಿಗೆ ಮನೆಯಲ್ಲಿದ್ದು ಮನೆಯನ್ನು ಬದಲಿಸುವಂತಹ ಕುಟುಂಬದವರಿಗೆ ಸಿಹಿ ಸುದ್ದಿಯೊಂದನ್ನು ನೀಡಿದ್ದು, ಅವರಿಗೂ ಗೃಹ ಜ್ಯೋತಿ ಸೌಲಭ್ಯದ ಅವಕಾಶವನ್ನು ನೀಡಲಾಗುತ್ತಿದೆ. ಇದಕ್ಕಾಗಿ ಗೃಹ ಜ್ಯೋತಿ ಫಲಾನುಭವಿಗಳಿಗೆ ಮನೆ ಬದಲಿಸಿದರೂ ಡಿ-ಲಿಂಕ್ ಗೆ ಅವಕಾಶವನ್ನು ಕಲ್ಪಿಸಲಾಗಿದೆ.

ಈ ಕುರಿತಂತೆ ಇಂಧನ ಇಲಾಖೆಯಿಂದ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಮನೆ ಬದಲಾಯಿಸಿದ ನಂತರ ಗೃಹ ಜ್ಯೋತಿ ಯೋಜನೆಯ ಲಾಭ ಪಡೆಯಲು ಹಳೆ ಮನೆಯ ಆರ್.ಆರ್. ಸಂಖ್ಯೆಯನ್ನು ಡಿ-ಲಿಂಕ್ ಮಾಡುವ ಸೌಲಭ್ಯ ಈಗ ರಾಜ್ಯದ ಜನರಿಗೆ ಲಭ್ಯವಾಗಲಿದೆ. ಬಾಡಿಗೆ ಮನೆ ಅಥವಾ ಯಾವುದೇ ಕಾರಣಕ್ಕೆ ಮನೆ ಬದಲಿಸುವ ಸಂದರ್ಭದಲ್ಲಿ ಹಳೆಯ ಖಾತೆ ಸಂಖ್ಯೆಯನ್ನು ಡಿ-ಲಿಂಕ್ ಮಾಡಿ, ಮತ್ತೊಂದು ಮನೆಯ ಆರ್.ಆರ್. ಸಂಖ್ಯೆಯೊಂದಿಗೆ ನೋಂದಣಿಯಾಗಿ, ಗೃಹ ಜ್ಯೋತಿಯ ಲಾಭ ಪಡೆಯಬಹುದಾಗಿದೆ ಎಂದು ತಿಳಿಸಿದೆ.

ಡಿ-ಲಿಂಕ್‌ ಮಾಡುವುದು ಹೇಗೆ?
* ಗ್ರಾಹಕರ https://sevasindhu.karnataka.gov.in/GruhaJyothi_Delink/GetAadhaarData.aspx ಲಿಂಕ್ ಮೂಲಕ ನೋಂದಾಯಿಸಿಕೊಳ್ಳಬಹುದಾಗಿದೆ.

* ಗೃಹ ಜ್ಯೋತಿ ಪೋರ್ಟಲ್ ಓಪನ್ ಆಗದೇ ಇದ್ದಲ್ಲಿ, Cache Memory Clear ಮಾಡಿ ನಂತರ ಪೋರ್ಟಲ್ ಲಿಂಕ್ ಕ್ಲಿಕ್ ಮಾಡಿ ಸೇವೆಯನ್ನು ಪಡೆಯಬಹುದಾಗಿದೆ.

* ಮನೆ ಬದಲಿಸುವ ಸಂದರ್ಭಲ್ಲಿ ಆಧಾರ್‌ ನಂಬರ್‌ ಜತೆ ಲಿಂಕ್‌ ಆಗಿರುವ ಆರ್‌.ಆರ್‌. ನಂಬರ್‌ ವಿವರ ಪರಿಶೀಲಿಸಿ ಡಿ-ಲಿಂಕ್‌ ಮಾಡಬಹುದು. ಹೊಸ ಮನೆಗೆ ಗೃಹಜ್ಯೋತಿ ಲಾಭ ಪಡೆಯಲು ಸದ್ಯ ಯಾವುದೇ ಆಧಾರ್‌ ಜತೆ ಲಿಂಕ್‌ ಆಗಿರದ ಆರ್‌ .ಆರ್‌. ನಂಬರ್‌ಗೆ ಲಿಂಕ್‌ ಮಾಡಬಹುದು. ಅಂದರೆ, ಈ ಹಿಂದೆ ಮನೆಯಲ್ಲಿ ವಾಸವಿದ್ದರೂ ಡಿ-ಲಿಂಕ್‌ ಮಾಡಿರುವುದನ್ನು ಖಾತ್ರಿ ಪಡಿಸಿಕೊಳ್ಳಿ.

You may also like