2
Mangaluru : ಸರಕು ತುಂಬಿಸಿಕೊಂಡು ಮಂಗಳೂರಿನಿಂದ ಲಕ್ಷ ದ್ವೀಪಕ್ಕೆ ಹೊರಟಿದ್ದ ಹಡಗಿನ ಒಳಗೆ ನೀರು ತುಂಬಿಕೊಂಡು, ಹಡಗು ಮುಳುಗಡೆಯಾಗಿರುವ ಘಟನೆ ನಡೆದಿದೆ.
12ರಂದು ಎಂ.ಎಸ್.ವಿ. ಸಲಾಮತ್ ಎಂಬ ಹಡಗು ಮಂಗಳೂರು ಬಂದರಿನಿಂದ ಹೊರಟಿತ್ತು. ಹಡಗು 60 ನಾಟಿಕಲ್ ಮೈಲು ದೂರದಲ್ಲಿ ಮುಳುಗಡೆಯಾಗಿದೆ. ತಾಂತ್ರಿಕ ಸಮಸ್ಯೆಯಿಂದಾಗಿ ಹಡಗಿನೊಳಗೆ ನೀರು ನುಗ್ಗಿ ಮುಳುಗಿದೆ.
ಇನ್ನು ಮುಳುಗುತ್ತಿದ್ದ ಹಡಗಿನಿಂದ ಸಣ್ಣ ಬೋಟಿಗೆ ಹಾರಿ ಆರು ಜನ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಡಿಂಗಿ ಬೋಟ್ ಮೂಲಕ ಸಿಬ್ಬಂದಿ ಪ್ರಾಣ ಉಳಿಸಿಕೊಂಡಿದ್ದಾರೆ. ಕರಾವಳಿ ರಕ್ಷಣಾ ಪಡೆಗೆ ಬಂದ ಮಾಹಿತಿಯ ಹಿನ್ನೆಲೆಯಲ್ಲಿ ಸಿಬ್ಬಂದಿಯನ್ನು ರಕ್ಷಣೆ ಮಾಡಲಾಗಿದೆ.
