Home » Bangalore iskcon Temple: ಬೆಂಗಳೂರು ಇಸ್ಕಾನ್‌ ದೇವಾಲಯಕ್ಕೆ ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ವಿಜಯ

Bangalore iskcon Temple: ಬೆಂಗಳೂರು ಇಸ್ಕಾನ್‌ ದೇವಾಲಯಕ್ಕೆ ಸುಪ್ರೀಂಕೋರ್ಟ್‌ನಿಂದ ಐತಿಹಾಸಿಕ ವಿಜಯ

0 comments

Bangalore iskcon Temple: ಬೆಂಗಳೂರು ಇಸ್ಕಾನ್‌ ಮತ್ತು ಮುಂಬೈ ಇಸ್ಕಾನ್‌ ನಡುವಿನ ಕಾನೂನು ಸಮರಕ್ಕೆ ತಾರ್ಕಿಕ ಅಂತ್ಯ ದೊರಕಿದೆ. ಬೆಂಗಳೂರಿನ ಹರೇ ಕೃಷ್ಣ ಮಂದಿರ ಮತ್ತು ಶೈಕ್ಷಣಿಕ ಸಂಕೀರ್ಣದ ನಿಯಂತ್ರಣದ ಹೋರಾಟದಲ್ಲಿ ಸುಪ್ರೀಂಕೋರ್ಟ್‌ ಬೆಂಗಳೂರಿನ ಇಸ್ಕಾನ್‌ ದೇಗುಲದ ಪರವಾಗಿ ತೀರ್ಪು ನೀಡಿದೆ.

2023 ರಲ್ಲಿ ಕರ್ನಾಟಕ ಹೈಕೋರ್ಟ್‌ ಬೆಂಗಳೂರು ಇಸ್ಕಾನ್‌ ಅಧಿಕಾರವನ್ನು ಮುಂಬೈ ಅಧಿಕಾರಕ್ಕೆ ನೀಡಿ ಆದೇಶವನ್ನು ಹೊರಡಿಸಿತ್ತು. ಇದನ್ನು ಪ್ರಶ್ನೆ ಮಾಡಿ ಬೆಂಗಳೂರು ಇಸ್ಕಾನ್‌ ಸೊಸೈಟಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು .

ಬೆಂಗಳೂರಿನ ಇಸ್ಕಾನ್‌ ಹರೇ ಕೃಷ್ಣ ದೇವಾಲಯದ ಕುರಿತು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪನ್ನು ನೀಡಿದೆ. ದೇವಾಲಯ ಬೆಂಗಳೂರು ಇಸ್ಕಾನ್‌ ಸೊಸೈಟಿಗೆ ಸೇರಿದ್ದು ಎಂದು ಸುಪ್ರೀಂಕೋರ್ಟ್‌ ಹೇಳಿದೆ.

ಬೆಂಗಳೂರಿನ ಇಸ್ಕಾನ್‌ ಹರೇ ಕೃಷ್ಣ ದೇವಸ್ಥಾನ ಮತ್ತು ಶೈಕ್ಷಣಿಕ ಸಂಕೀರ್ಣದ ಒಡೆತನದ ಕುರಿತು ಕರ್ನಾಟಕ ಹೈಕೋರ್ಟ್‌ ನೀಡಿದ್ದ ತೀರ್ಪನ್ನು ರದ್ದು ಮಾಡಿರುವ ಸುಪ್ರೀಂ ಕೋರ್ಟ್‌ ದೇಗುಲದ ಒಡೆತನ ಬೆಂಗಳೂರಿನ ಇಸ್ಕಾನ್‌ ಸೊಸೈಟಿಗೆ ಸೇರಿದ್ದು ಎಂದು ತೀರ್ಪು ನೀಡಿದೆ.

You may also like