Home » Bagalakote : ತಾಳಿ ಕಟ್ಟಿದ 20 ನಿಮಿಷಕ್ಕೆ ವರ ಹೃದಯಘಾತಕ್ಕೆ ಬಲಿ!!

Bagalakote : ತಾಳಿ ಕಟ್ಟಿದ 20 ನಿಮಿಷಕ್ಕೆ ವರ ಹೃದಯಘಾತಕ್ಕೆ ಬಲಿ!!

0 comments

Bagalakote : ತಾಳಿ ಕಟ್ಟಿದ 20 ನಿಮಿಷಕ್ಕೆ ನವ ವರ ಹೃದಯಘಾತಕ್ಕೆ ಬಲಿಯಾಗಿರುವ ವಿಚಿತ್ರ ಪ್ರಕರಣ ಒಂದು ಬಾಗಲಕೋಟೆಯಲ್ಲಿ ಬೆಳಕಿಗೆ ಬಂದಿದೆ.

ಹೌದು, ಬಾಗಲಕೋಟೆ ಜಿಲ್ಲೆಯ ಜಮಖಂಡಿಯ ನಂದೀಕೇಶ್ವರ ಕಲ್ಯಾಣ ಮಂಟಪದಲ್ಲಿ ಎರಡು ಕುಟುಂಬದವರ ಸಂಭ್ರಮವೋ ಸಂಭ್ರಮ. ಆದರೆ ಈ ಸಂಭ್ರಮ ಹೆಚ್ಚು ಕಾಲ ಉಳಿಯಲಿಲ್ಲ. ತಾಳಿ ಕಟ್ಟಿ ಕೇವಲ 20 ನಿಮಿಷಗಳಾಗಿ ಇತರ ವಿಧಿವಿಧಾನಗಳು ನಡೆಯುತ್ತಿರುವಾಗಲೇ ಇದ್ದಕ್ಕಿದ್ದಂತೆ ಮದುಮಗ ಪ್ರವೀಣನಿಗೆ ಎದೆನೋವು ಕಾಣಿಸಿಕೊಂಡಿತ್ತು. ಆಸ್ಪತ್ರೆಗೆ ದಾಖಲಿಸಬೇಕು ಎನ್ನುವಾಗಲೇ ಮದುವೆ ಮಂಟಪದಲ್ಲಿಯೇ ಆತ ಸಾವು ಕಂಡಿದ್ದಾನೆ.

ಖುಷಿಯಿಂದ ಮದುಮಗಳನ್ನು ಕಲ್ಯಾಣ ಮಂಟಪದಿಂದ ಕರೆದುಕೊಂಡು ಹೋಗಬೇಕು ಎನ್ನುವ ಆಸೆಯಲ್ಲಿದ್ದ ವರನ ಕುಟುಂಬಕ್ಕೆ ಬರ ಸಿಡಿಲು ಬಡಿದಂತಾಗಿದೆ.

You may also like