Viral News: ಮದುವೆಯಾದ ಕೆಲವೇ ನಿಮಿಷವಾಗಿದೆ ವಧುವೋರ್ವಳು ತನ್ನ ಪತಿಗೆ ಅಣ್ಣ ಎಂದು ಕರೆದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ನನಗೆ ಈ ಮದುವೆ ಇಷ್ಟವಿರಲಿಲ್ಲ, ಒತ್ತಾಯದಿಂದ ಮದುವೆ ಮಾಡಲಾಗಿದೆ ಎಂದು ವರನ ಬಳಿ ಹೋಗಿ ವಧು ಹೇಳಿದ್ದಾಳೆ. ನನ್ನ ಬದುಕು ಕೂಡಾ ಸಹೋದರ ಸಹೋದರಿಯಂತೆ ಆಗುತ್ತದೆ. ಇದಕ್ಕೆ ಭಯಭೀತಗೊಂಡ ವರ ಆಕೆಯನ್ನು ಆ ಕೂಡಲೇ ಅವಳ ಮನೆಗೆ ಕರೆದೊಯ್ದಿದ್ದಾನೆ.
ವರ ಸಾಗರ್‌ನ ಬಡಾ ಬಜಾರ್‌ನ ನಿವಾಸಿಯಾಗಿದ್ದು, ಲಲಿತಪುರದ ಯುವತಿಯನ್ನು ವಿವಾಹವಾಗಿದ್ದಾನೆ. ಮದುವೆಯಾದ ಕೆಲವೇ ಕ್ಷಣಗಳಲ್ಲಿ ವಧು ನನಗೆ ಮದುವೆ ಇಷ್ಟವಿಲ್ಲ, ಕುಟುಂಬದ ಒತ್ತಡದಿಂದ ನಾನು ಬಂದಿದ್ದೇನೆ. ನಾನು ಹಾರ ಧರಿಸಿ ಮದುವೆಯ ಪ್ರತಿಜ್ಞೆ ಮಾಡಿದ್ದೇನೆ. ಆದರೆ ನೀವು ನನ್ನನ್ನು ಮನೆಗೆ ಕರೆದುಕೊಂಡು ಹೋದರೆ ನಾನು ನಿಮ್ಮ ಹೆಂಡತಿಯಾಗುವುದಿಲ್ಲ. ನಿಮ್ಮ ಸಹೋದರಿಯಂತೆ ಬದುಕುತ್ತೇನೆ ಎಂದು ಹೇಳಿ ಶಾಕ್ ನೀಡಿದ್ದಾಳೆ.
ಕೂಡಲೇ ವರ ಕಾರಿನಲ್ಲಿ ಆಕೆಯನ್ನು ಆಕೆಯ ಮನೆಗೆ ಕರೆದುಕೊಂಡು ಹೋಗಿದ್ದಾನೆ. ನಂತರ ಪರಸ್ಪರ ಒಪ್ಪಿಗೆಯ ಮೇರೆಗೆ ಈ ಮದುವೆಯನ್ನು ಕ್ಯಾನ್ಸಲ್ ಮಾಡಲಾಗಿದೆ. ವಧುವಿನ ಕಡೆಯವರು ವರನ ಕುಟುಂಬಸ್ಥರಲ್ಲಿ ಕ್ಷಮೆಯಾಚಿದ್ದಾರೆ.
