Home » Bengaluru: ಬೆಂಗಳೂರು : ಕನ್ನಡಿಗರಿಗೆ ಅವಮಾನ ಮಾಡಿದ ಹೋಟೆಲ್ ಸೀಜ್, ಮ್ಯಾನೇಜರ್ ಅರೆಸ್ಟ್!

Bengaluru: ಬೆಂಗಳೂರು : ಕನ್ನಡಿಗರಿಗೆ ಅವಮಾನ ಮಾಡಿದ ಹೋಟೆಲ್ ಸೀಜ್, ಮ್ಯಾನೇಜರ್ ಅರೆಸ್ಟ್!

0 comments

Bengaluru: ಬೆಂಗಳೂರಿನಲ್ಲಿ (Bengaluru) ಕನ್ನಡಿಗರನ್ನು ಕೆಣಕಿದ ಹೋಟೆಲ್ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ಹೋಟೆಲ್ ಸೀಜ್ ಮಾಡಲಾಗಿದೆ. ತಾವರೆಕೆರೆ ಮುಖ್ಯರಸ್ತೆಯ ಭವನಪ್ಪ ಲೇಔಟ್ ನ ಜಿ.ಎಸ್. ಸೂಟ್ಸ್ ಹೋಟೆಲ್ ನಲ್ಲಿ ಕನ್ನಡಿಗರ ಕುರಿತ ಅಶ್ಲೀಲ ಪದ ಪ್ರದರ್ಶನವಾಗಿರುವುದು ಬೆಳಕಿಗೆ ಬಂದಿದೆ.

ಮಡಿವಾಳ ಪೊಲೀಸ್ ಠಾಣೆ ಸಾಮಾಜಿಕ ಜಾಲತಾಣ ವಿಭಾಗದ ಉಸ್ತುವಾರಿ ಪಿಎಸ್‌ಐ ರಮೇಶ ಹೂಗಾರ ಅವರು ಹೋಟೆಲ್ ಮಾಲೀಕ ಜಂಶದ್ ಮತ್ತು ಮ್ಯಾನೇಜರ್ ಸರ್ಫರಾಜ್ ವಿರುದ್ಧ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಎಲ್‌ಇಡಿ ಡಿಜಿಟಲ್ ಬೋರ್ಡ್ ಮಾಡಿಕೊಟ್ಟಿದ್ದ ವ್ಯಕ್ತಿಗೂ ನೋಟಿಸ್ ಜಾರಿ ಮಾಡಲಾಗಿದೆ.

ಕನ್ನಡಿಗರಿಗೆ ಅಪಮಾನ ಮಾಡಿದ ಜಿಎಸ್ ಸೂಟ್ ಹೋಟೆಲ್ ಸೀಜ್ ಮಾಡಲಾಗಿದ್ದು, ಈಗಾಗಲೇ ಪ್ರಕರಣಕ್ಕೆ ಸಂಬಂಧಿಸಿದಂತೆ ಸದ್ಯ ಕೇರಳದಲ್ಲಿರುವ ಹೋಟೆಲ್ ಮಾಲೀಕ ಜಂಶದ್ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಮ್ಯಾನೇಜರ್ ಸರ್ಫರಾಜ್ ಬಂಧಿಸಲಾಗಿದೆ.

You may also like