Home » Money Plant: ಮನಿಪ್ಲಾಂಟ್‌ ನೆಟ್ಟ ನಂತರ ಏನೂ ಪ್ರಯೋಜನ ಆಗಿಲ್ಲವೇ? ಪರಿಹಾರ ಇಲ್ಲಿದೆ

Money Plant: ಮನಿಪ್ಲಾಂಟ್‌ ನೆಟ್ಟ ನಂತರ ಏನೂ ಪ್ರಯೋಜನ ಆಗಿಲ್ಲವೇ? ಪರಿಹಾರ ಇಲ್ಲಿದೆ

0 comments

Money Plant: ಮನಿಪ್ಲಾಂಟ್‌ ಅನ್ನು ವಾಸ್ತುಶಾಸ್ತ್ರದಲ್ಲಿ ಸಕಾರಾತ್ಮಕ ಶಕ್ತಿಯನ್ನು ಹೊಂದಿರುವ ಸಸ್ಯ ಎಂದು ಪರಿಗಣಿಸಲಾಗುತ್ತದೆ. ಕೆಲವು ನಿಯಮಗಳನ್ನು ನೀವು ಮನಸ್ಸಿನಲ್ಲಿಟ್ಟುಕೊಂಡರೆ ಇದರ ಪ್ರಯೋಜನ ಅನೇಕ. ಹೌದು, ನೀವೇನಾದರೂ ಮನಿಪ್ಲಾಂಟ್‌ ನೆಟ್ಟರೂ ಯಾವುದೇ ಪ್ರಯೋಜನ ಸಿಗುತ್ತಿಲ್ಲವೆಂದು ಕೆಲವು ತಪ್ಪುಗಳನ್ನು ನೀವು ಮಾಡಿರಬಹುದು. ಈ ವಾಸ್ತು ಸಲಹೆ ಪಾಲಿಸಿದರೆ ಅದರ ಪ್ರಯೋಜನವನ್ನು ನೀವು ಪಡೆಯಬಹುದು.

ಮನಿ ಪ್ಲಾಂಟ್‌ ಸಂಪತ್ತು, ಸಮೃದ್ಧಿಯ ಸಂಕೇತ ಎಂದು ವಾಸ್ತುಶಾಸ್ತ್ರದಲ್ಲಿ ಹೇಳಲಾಗಿದೆ. ಇದನ್ನು ನೆಟ್ಟರೆ ಆರ್ಥಿಕತೆ ಸಮಸ್ಯೆ ದೂರವಾಗುತ್ತದೆ ಎಂದು ಹೇಳಲಾಗುತ್ತದೆ.

ದಿಕ್ಕು:ಮನೆಯ ಆಗ್ನೇಯ ದಿಕ್ಕು ಎಂದರೆ ಅಗ್ನಿಕೋನವು ಮನಿಪ್ಲಾಂಟ್‌ ಇಡಲು ಉತ್ತಮ. ಈ ದಿಕ್ಕಿನಲ್ಲಿ ನೀವು ಮನಿಪ್ಲಾಂಟ್‌ ನೆಟ್ಟರೆ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿ ನಿಮ್ಮ ಮನೆ ಕುಟುಂಬದಿಂದ ದೂರ ಇರುತ್ತದೆ. ಈಶಾನ್ಯ ದಿಕ್ಕಿನಲ್ಲಿ ಈ ಗಿಡವನ್ನು ಇಡಬೇಡಿ. ಇಟ್ಟರೆ ಆರ್ಥಿಕ ಸಮಸ್ಯೆ ಉಂಟಾಗಬಹುದು.

ಮನೆಯೊಳಗೆ ಮನಿಪ್ಲಾಂಟ್‌ ನೆಡುವುದು ಶುಭಕರ. ಮನಿಪ್ಲಾಂಟ್‌ ಬಳ್ಳಿ ನೆಲವನ್ನು ಮುಟ್ಟಬಾರದು. ಇದನ್ನು ಗಮನದಲ್ಲಿಟ್ಟುಕೊಳ್ಳಿ. ಶಾಸ್ತ್ರದ ಪ್ರಕಾರ ರಾತ್ರಿಯಲ್ಲಿ ಮನಿ ಪ್ಲಾಂಟ್‌ ಅನ್ನು ಮುಟ್ಟಬಾರದು ಅಥವಾ ನೀರು ಹಾಕಬಾರದು. ಮನಿಪ್ಲಾಂಟ್‌ ಒಣಗಬಾರದು. ಒಣ, ಹಳದಿ ಎಲೆಗಳನ್ನು ತೆಗೆದುಹಾಕುತ್ತಿರಿ.

ಹಾಲನ್ನು ನೀರಿನಲ್ಲಿ ಬೆರೆಸಿ ಮನಿಪ್ಲಾಂಟ್‌ಗೆ ಹಾಕಬಹುದು. ಈ ಮೂಲಕ ಲಕ್ಷ್ಮೀ ದೇವಿಯ ಆಶೀರ್ವಾದ ಪಡೆಯಲು ಬುಡಕ್ಕೆ ಕೆಂಪು ದಾರ ಅಥವಾ ಕಲವ ಕಟ್ಟಬೇಕು.

ಜ್ಯೋತಿಷ್ಯ ಶಾಸ್ತ್ರದಲ್ಲಿ ಕೆಲವು ಸಸ್ಯ ಮಂಗಳಕರ ಎಂದು ಹೇಳಲಾಗುತ್ತದೆ. ಅವುಗಳಲ್ಲಿ ಮನಿ ಪ್ಲಾಂಟ್‌ ಮತ್ತು ತುಳಸಿ ಸೇರಿದೆ. ತುಳಸಿ ಮತ್ತು ಮನಿಪ್ಲಾಂಟನ್ನು ನೀವು ನಿಮ್ಮ ಮನೆಯಲ್ಲಿ ಒಟ್ಟಿಗೆ ಇಟ್ಟರೆ, ಧನಾತ್ಮಕ ಶಕ್ತಿಯ ಹರಿವು ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ. ಮನೆಯಲ್ಲಿ ಜಗಳಗಳು ಕಡಿಮೆಯಾಗುತ್ತದೆ ಎನ್ನಲಾಗಿದೆ.

ವಾಸ್ತುಪ್ರಕಾರ, ಮನಿಪ್ಲಾಂಟ್‌ ಮತ್ತು ತುಳಸಿಯ ಬಳಿ ಮುಳ್ಳಿನ ಗಿಡಗಳನ್ನು ಎಂದಿಗೂ ನೆಡಬಾರದು. ಇವು ಸಸ್ಯದ ಸಕಾರಾತ್ಮಕ ಪರಿಣಾಮ ಕಡಿಮೆ ಮಾಡುತ್ತದೆ. ಈ ಎಲ್ಲಾ ನಿಮಯಗಳನ್ನು ನೀವು ನೆನಪಿನಲ್ಲಿಟ್ಟುಕೊಂಡರೆ ಮನೆಗೆ ಸಂಪತ್ತು ಮತ್ತು ಸಮೃದ್ಧಿ ಬರುತ್ತದೆ.

You may also like