Home » Accident: ಭೀಕರ ಅಪಘಾತ: ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರು ಸಾವು!

Accident: ಭೀಕರ ಅಪಘಾತ: ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರು ಸಾವು!

0 comments

Accident: ಕಾರು ಬಾವಿಗೆ ಬಿದ್ದು ಕರ್ನಾಟಕದ ಮೂವರು ಸಾವನ್ನಪ್ಪಿರುವ ಘಟನೆ ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ಕುರಪಲ್ಲಿ ಗ್ರಾಮದಲ್ಲಿ ನಡೆದಿದೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುತ್ತಕದ ಲೋಕೇಶ್, ಚಂದನಹಳ್ಳಿ ಗ್ರಾಮದ ಶಿವಾನಂದ್‌ ಹಾಗೂ ಕೋಲಾರ ಜಿಲ್ಲೆಯ ಸಗಟೂರಿನ ಚಲಪತಿ ಮೃತ ದುರ್ದೈವಿಗಳು.

ಅಡುಗೆ ಕೆಲಸಕ್ಕಾಗಿ ಕಾರಿನಲ್ಲಿ ತೆರಳುತ್ತಿದ್ದಾ ಅಪಘಾತ (Accident) ಸಂಭವಿಸಿದ್ದು, ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅನ್ನಮಯ್ಯ ಜಿಲ್ಲೆಯ ಪಿಲೇರು ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

You may also like