Home » OPS: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಶೀಘ್ರದಲ್ಲೇ ಹಳೆ ಪಿಂಚಣಿ ಜಾರಿ

OPS: ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ – ಶೀಘ್ರದಲ್ಲೇ ಹಳೆ ಪಿಂಚಣಿ ಜಾರಿ

0 comments

OPS: ಕರ್ನಾಟಕದ ಕಾಂಗ್ರೆಸ್ ಸರ್ಕಾರ ತಾನು ಅಧಿಕಾರಕ್ಕೆ ಬರುವ ಮೊದಲು, ಕಾಂಗ್ರೆಸ್ ಏನಾದರೂ ಗೆದ್ದು ಸರ್ಕಾರ ರಚನೆ ಮಾಡಿದರೆ ರಾಜ್ಯ ಸರ್ಕಾರಿ ನೌಕರರ ಬೇಡಿಕೆಯಂತೆ ಹೊಸ ಪಿಂಚಣಿ ಯೋಜನೆ (NPS) ರದ್ದುಗೊಳಿಸಿ ಹಳೆಯ ಪಿಂಚಣಿ(OPS) ಯೋಜನೆಯನ್ನು ಪುನಃ ಜಾರಿಗೆ ತರುವ ಭರವಸೆ ನೀಡಿತ್ತು.

ಇದೀಗ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ(Congress Government) ರಚನೆಯಾಗಿ, ಅಧಿಕಾರಕ್ಕೆ ಬಂದು ಎರಡು ವರ್ಷ ಕಳೆಯುತ್ತಾ ಬಂದರು ಈ ಕುರಿತ ಯಾವುದೇ ಆದೇಶ ಹೊರಡಿಸುವುದು, ಕ್ರಮ ಕೈಗೊಳ್ಳುವುದು ಆಗಿರಲಿಲ್ಲ. ಆದರೀಗ ಸಚಿವ ಮಧು ಬಂಗಾರಪ್ಪ ಅವರು ಒಪಿಎಸ್ ಜಾರಿ ಕುರಿತು ಮಹತ್ವದ ಹೇಳಿಕೆ ನೀಡಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು 2006ರ ಬಳಿಕ ನೇಮಕಗೊಂಡ ಸರಕಾರಿ ನೌಕರರಿಗೆ ಎನ್‌ಪಿಎಸ್‌ ಬದಲು ಒಪಿಎಸ್‌ ಜಾರಿ ಮಾಡುವುದಾಗಿ ಪ್ರಣಾಳಿಕೆಯಲ್ಲಿ ಭರವಸೆ ನೀಡಲಾಗಿತ್ತು. ಆ ಪ್ರಕಾರ ಮುಖ್ಯಮಂತ್ರಿಗಳು ಒಪಿಎಸ್‌ ಜಾರಿಗೆ ಉತ್ಸುಕರಾಗಿದ್ದು, ಸದ್ಯದಲ್ಲೇ ಸರಕಾರ ಅದನ್ನು ಜಾರಿಗೊಳಿಸಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

You may also like