Home » Dharmasthala: ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ಸಾವು ಕೇಸ್‌: ಆರೋಪಿ ಪ್ರೊ.ಬಿಜಿಲ್‌ ಮ್ಯಾಥ್ಯೂ ಅರೆಸ್ಟ್‌

Dharmasthala: ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ಸಾವು ಕೇಸ್‌: ಆರೋಪಿ ಪ್ರೊ.ಬಿಜಿಲ್‌ ಮ್ಯಾಥ್ಯೂ ಅರೆಸ್ಟ್‌

0 comments

Belthangady: ಪಂಜಾಬ್‌ನಲ್ಲಿ ಧರ್ಮಸ್ಥಳ ಮೂಲದ ಯುವತಿ ಸಾವು ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಾಧ್ಯಾಪಕ ಬಿಜಿಲ್‌ ಮ್ಯಾಥ್ಯೂನನ್ನು ಪೊಲೀಸರು ಬಂಧನ ಮಾಡಿದ್ದಾರೆ.

ಏರೋಸ್ಪೇಸ್‌ನ ಉದ್ಯೋಗಿ ಆಕಾಂಕ್ಷಾ ಎಸ್‌.ನಾಯರ್‌ (22) ಮೃತ ಯುವತಿ. ಕಾಲೇಜು ಸರ್ಟಿಫಿಕೇಟ್‌ ತರಲೆಂದು ಪಂಜಾಬ್‌ಗೆ ತೆರಳಿದ್ದು, ಅಲ್ಲಿ ಕಾಲೇಜಿನ ಪ್ರೊ. ಬಿಜಿಲ್‌ ಮ್ಯಾಥ್ಯೂ ಜೊತೆ ಯಾವುದೋ ಕಾರಣಕ್ಕೆ ಗಲಾಟೆ ನಡೆದಿದೆ. ನಂತರ ಮನನೊಂದು ಕಾಲೇಜಿನ ಕಟ್ಟಡದಿಂದ ಜಿಗಿದು ಸುಸೈಡ್‌ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರೊ.ಮ್ಯಾಥ್ಯೂ ಅವರನ್ನು ಬಂಧನ ಮಾಡಲಾಗಿದ್ದು, ಎಫ್‌ಐಆರ್‌ ದಾಖಲು ಮಾಡಿ ಪಂಜಾಬ್‌ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

You may also like