3
Udupi: ಜಿಲ್ಲೆಯಲ್ಲಿ ಇಂದು ಸುರಿದ ಭಾರೀ ಮಳೆಗೆ ನಗರದ ವಿವಿಧೆಡೆ ಕೃತಕ ನೆರೆ ಉಂಟಾಗಿದೆ. ಉಡುಪಿಯ ಹಲವು ಪ್ರದೇಶಗಳಲ್ಲಿ ಮಳೆಯಿಂದಾಗಿ ಹಲವು ಪ್ರದೇಶಗಳಲ್ಲಿ ಜನಜೀವನ ಅಸ್ತವ್ಯಸ್ತ ಉಂಟಾಗಿರುವ ಘಟನೆ ನಡೆದಿದೆ.
ದೊಡ್ಡಣಗುಡ್ಡೆಯಲ್ಲಿ ಮರ ಬಿದ್ದಿದ್ದು, ತೋಡುಕುಸಿತ ಉಂಟಾಗಿದ್ದರ ಪರಿಣಾಮ ವಿವಿಧೆಡೆ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.
ಮಣಿಪಾಲದ ಐನಾಕ್ಸ್ ಬಳಿ ಕೂಡಾ ತೋಡು ಕುಸಿತ ಉಂಟಾಗಿ ಕಲ್ಲುಗಳು ರಸ್ತೆಗೆ ಬಂದು ಹಲವು ಹೊತ್ತು ವಾಹನ ದಟ್ಟನೆ ಉಂಟಾಗಿದೆ. ನಂತರ ಸ್ಥಳೀಯರ ಸಹಾಯದಿಂದ ತೆರವು ಮಾಡಲಾಗಿದೆ. ಜೆಸಿಬಿ ಬಳಸಿ ರಸ್ತೆ ಮಧ್ಯೆ ಬಿದ್ದಿದ್ದ ಕಲ್ಲುಗಳನ್ನು ತೆರವು ಮಾಡಲಾಗಿದೆ.
ಶಾಸಕ ಯಶ್‌ಪಾಲ್ ಸುವರ್ಣ ಮಣಿಪಾಲದ ಮಳೆಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡಿ, ಅಧಿಕಾರಿಗಳಲ್ಲಿ ಸೂಕ್ರ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ.
