Home » Udupi: ಮಣಿಪಾಲ: ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ!

Udupi: ಮಣಿಪಾಲ: ವಿದ್ಯಾರ್ಥಿಯ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆ!

0 comments
Death

Udupi: ಮಣಿಪಾಲದ ಸ್ಕೂಲ್ ಆಫ್ ಕಾಮರ್ಸ್ ಎಕೊನೋಮಿಕ್ ಅಕಾಡೆಮಿ ವಿದ್ಯಾರ್ಥಿಯೊಬ್ಬನ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪಟ್ಟೆಯಾಗಿದೆ.

ಮೃತರನ್ನು ಛತ್ತಿಸ್‌ಗಡದ ಅನ್ಶುಲ್ ಯಾದವ್ (21) ಎಂದು ಗುರುತಿಸಲಾಗಿದೆ. ಇವರು ಬಿಬಿಎ (ಬ್ಯಾಚುಲರ್ ಆಫ್ ಬ್ಯುಸಿನೆಸ್ ಅಕಾಡೆಮಿ) ವ್ಯಾಸಾಂಗ ಮಾಡುತ್ತಿದ್ದು ಮಣಿಪಾಲದ ಎಂಐಟಿ ಹಾಸ್ಟೆಲ್‌ ನಲ್ಲಿ ವಾಸ್ತವ್ಯ ಮಾಡಿಕೊಂಡಿದ್ದರು.

ಇವರು ತನ್ನ ಮೊದಲ ವರ್ಷದ ಸೆಕೆಂಡ್ ಸೆಮಿಸ್ಟರ್‌ನಲ್ಲಿ 4 ವಿಷಯ ಗಳಲ್ಲಿ ಅನುತ್ತೀರ್ಣಗೊಂಡ ವಿಚಾರದಲ್ಲಿ ಮನನೊಂದು ಹಾಸ್ಟೆಲ್ ರೂಮಿನಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೃತದೇಹವು ಕೊಳೆತ ಸ್ಥಿತಿಯಲ್ಲಿ ಕಂಡು ಬಂದಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

You may also like