Home » Moodigere: ಮೂಡಿಗೆರೆ: ಪ್ರವಾಸಿಗರಿದ್ದ ಮಿನಿ ಬಸ್‌ ಮೇಲೆ ಮರ ಬಿದ್ದು ಮೂವರು ಪ್ರವಾಸಿಗರಿಗೆ ಗಂಭೀರ ಗಾಯ

Moodigere: ಮೂಡಿಗೆರೆ: ಪ್ರವಾಸಿಗರಿದ್ದ ಮಿನಿ ಬಸ್‌ ಮೇಲೆ ಮರ ಬಿದ್ದು ಮೂವರು ಪ್ರವಾಸಿಗರಿಗೆ ಗಂಭೀರ ಗಾಯ

0 comments

Moodigere: ಮಲೆನಾಡು ಭಾಗದಲ್ಲಿ ಮಳೆ ಸುರಿಯುತ್ತಿದ್ದು, ಪ್ರವಾಸಿಗರಿದ್ದ ಮಿನಿಬಸ್‌ ಮೇಲೆ ಮರ ಬಿದ್ದು ಪ್ರವಾಸಿಗರಿಗೆ ಗಂಭೀರ ಗಾಯವಾಗಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ ಸಮೀಪದ ಸುಂಕಸಾಲೆ ಬಳಿ ನಡೆದಿದೆ.

ಠಾಣಿಝರಿ ಪ್ರವಾಸಕ್ಕೆ ತೆರಳಿ ವಾಪಸ್‌ ಆಗುವ ಸಂದರ್ಭದಲ್ಲಿ ಧಾರಾಕಾರ ಮಳೆಯಿಂದ ಸುಂಕಸಾಲೆ ಬಳಿ ಮಿನಿಬಸ್‌ ಮೇಲೆ ಮರ ಬಿದ್ದಿದೆ ಎಂದು ವರದಿಯಾಗಿದೆ. ಪರಿಣಾಮ ಬಸ್‌ನಲ್ಲಿದ್ದ ಮೂವರು ಪ್ರವಾಸಿಗರಿಗೆ ಗಂಭೀರ ಗಾಯವಾಗಿದ್ದು, ಬಸ್‌ ಮುಂಭಾಗ ಸಂಪೂರ್ಣ ಜಖಂಗೊಂಡಿದೆ.

You may also like