Home » Corona: ಜನರೇ ಎಚ್ಚರ, ಎಚ್ಚರ- ರಾಜ್ಯದಲ್ಲಿ ಕೊರೊನ ಹೊಸ ತಳಿಯ 8 ಪ್ರಕರಣ ಪತ್ತೆ

Corona: ಜನರೇ ಎಚ್ಚರ, ಎಚ್ಚರ- ರಾಜ್ಯದಲ್ಲಿ ಕೊರೊನ ಹೊಸ ತಳಿಯ 8 ಪ್ರಕರಣ ಪತ್ತೆ

0 comments

Corona: ಭಾರತ ಮತ್ತು ಇತರ ದೇಶಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳು ಮತ್ತೆ ಹೆಚ್ಚುತ್ತಿದೆ. ಅಧಿಕೃತ ಅಂಕಿಅಂಶಗಳ ಪ್ರಕಾರ ಸದ್ಯ ಭಾರತದಲ್ಲಿ 257 ಸಕ್ರಿಯ ಪ್ರಕರಣಗಳು ಇದೆ ಎಂದು ವರದಿಯಾಗಿವೆ. ಈ ಬೆನ್ನೆಲ್ಲೇ ಕರ್ನಾಟಕದಲ್ಲಿ ಎಂಟು ಪ್ರಕರಣಗಳು ವರದಿಯಾಗಿದೆ.

ಹೌದು, ಕೊರೋನಾ ಹೊಸ ಸೋಂಕು ಭಾರತಕ್ಕೂ ಕಾಲಿಟ್ಟಿದ್ದು, ಕರ್ನಾಟಕದಲ್ಲಿ ಇದೀಗ 8 ಪ್ರಕರಣಗಳು ಪತ್ತೆಯಾಗಿವೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. ಹೀಗಾಗಿ ಜನರು ಎಚ್ಚರಿಕೆ ಇರಬೇಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಭಾರತ ಮಾತ್ರವಲ್ಲದೇ ಇತರ ದೇಶಗಳಲ್ಲಿಯೂ ಹೊಸ ಕೊರೊನಾ ಪ್ರಕರಣಗಳು ದಾಖಲಾಗುತ್ತಿದ್ದು, ಥೈಲ್ಯಾಂಡ್, ಸಿಂಗಾಪುರ ಮತ್ತು ಹಾಂಗ್ ಕಾಂಗ್‌ನಲ್ಲಿ ಕೊರೊನಾ ಅಲೆ ಮತ್ತೆ ಹೆಚ್ಚಾಗಿದೆ. ಇನ್ನು ಹಾಂಗ್ ಕಾಂಗ್‌ನಲ್ಲಿ ಮೇ ಮೊದಲ ವಾರದಲ್ಲಿ 31 ಸಾವುಗಳು ಸಂಭವಿಸಿವೆ. ಕೊರೊನಾ ಹೊಸ ರೂಪಾಂತರ ತಳಿಗಳು ಪತ್ತೆಯಾಗುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.

You may also like