Home » Viral Video : ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿ ಚಿಂಪಾಂಜಿ – ಕೋಲು ಹಿಡಿದು ರಪ ರಪ ಭಾರಿಸಿದ ತಾಯಿ ಚಿಂಪಾಂಜಿ!! ಕ್ಯೂಟ್ ವಿಡಿಯೋ ವೈರಲ್

Viral Video : ಪ್ರವಾಸಿಗರ ಮೇಲೆ ಕಲ್ಲು ಎಸೆದ ಮರಿ ಚಿಂಪಾಂಜಿ – ಕೋಲು ಹಿಡಿದು ರಪ ರಪ ಭಾರಿಸಿದ ತಾಯಿ ಚಿಂಪಾಂಜಿ!! ಕ್ಯೂಟ್ ವಿಡಿಯೋ ವೈರಲ್

0 comments

Viral Video : ತಾಯಿ ಮತ್ತು ಮಕ್ಕಳ ಸಂಬಂಧ ಕೇವಲ ಮನುಷ್ಯರಲ್ಲಿ ಮಾತ್ರವಲ್ಲ. ಅದು ಇಡೀ ಪ್ರಾಣಿ ಸಂಕುಲಕ್ಕೂ ಕೂಡ ವ್ಯಾಪಿಸಿರುವ ಒಂದು ಅಮೂಲ್ಯವಾದ ಬಂಧ. ಮೂಕ ಪ್ರಾಣಿಗಳು ಕೂಡ ತನ್ನ ಕಂದಮ್ಮನ ಮೇಲೆ ಕಾಳಜಿ, ಪ್ರೀತಿಯನ್ನು ತೋರಿಸುತ್ತವೆ. ಜೊತೆಗೆ ಕೆಲವೊಮ್ಮೆ ತಮ್ಮ ಮರಿಗಳು ತಪ್ಪು ಮಾಡಿದಾಗ ತಮ್ಮದೇ ಭಾಷೆಯಲ್ಲಿ ಬುದ್ಧಿ ಹೇಳುತ್ತವೆ. ಇದೀಗ ಅಂತದ್ದೇ ಒಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.


ಹೌದು, ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಮರಿ ಚಿಂಪಾಂಜಿ (chimpanzee) ಯೂ ಪ್ರವಾಸಿಗರ ಮೇಲೆ ಕಲ್ಲು ಎಸೆದಿದ್ದು, ಇದನ್ನು ಕಂಡ ತಾಯಿ ಚಿಂಪಾಂಜಿಯೂ ಕೋಲು ಹಿಡಿದು ಮರಿಚಿಂಪಾಂಜಿಗೆ ರಪ ರಪ ಹೊಡೆದು, ಇನ್ನು ಹೀಗೆ ಮಾಡ್ಬಾರ್ದು ಎನ್ನುವ ರೀತಿ ಬುದ್ಧಿ ಹೇಳಿದೆ. ಇದನ್ನು ನೋಡುತ್ತಿದ್ದ ಪ್ರವಾಸಿಗರು ಜೋರಾಗಿ ನಗುವುದನ್ನು ಕಾಣಬಹುದು.

You may also like