Home » ಪಾಕಿಸ್ತಾನದಲ್ಲಿ ಶಾಲಾ ಬಸ್ ಮೇಲೆ ಆತ್ಮಾಹುತಿ ದಾಳಿ: ನಾಲ್ವರು ಮಕ್ಕುಳು ಬಲಿ, 38 ಮಂದಿಗೆ ಗಾಯ

ಪಾಕಿಸ್ತಾನದಲ್ಲಿ ಶಾಲಾ ಬಸ್ ಮೇಲೆ ಆತ್ಮಾಹುತಿ ದಾಳಿ: ನಾಲ್ವರು ಮಕ್ಕುಳು ಬಲಿ, 38 ಮಂದಿಗೆ ಗಾಯ

0 comments

Pakistan: ಪಾಕಿಸ್ತಾನದ ಖುಜ್ದಾರ್ ಬಳಿ ಶಾಲಾ ಬಸ್‌ಗೆ ಆತ್ಮಾಹುತಿ ಬಾಂಬ್ ದಾಳಿಯಾಗಿದ್ದು, ಈ ಘಟನೆಯಲ್ಲಿ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ ಹಾಗೂ 38 ಮಂದಿ ಗಾಯಗೊಂಡಿರುತ್ತಾರೆ.  ಪಾಕಿಸ್ತಾನದ ನೈಋತ್ಯ ಭಾಗದಲ್ಲಿರುವ ಖುಜ್ದಾರ್‌ನಲ್ಲಿ ಈ ಘಟನೆ ನಡೆದಿದ್ದು, ಪೊಲೀಸರು ಘಟನೆ ನಡೆದ ಸ್ಥಳವನ್ನು ಸುತ್ತುವರೆದು ಸಾಕ್ಷ್ಯಗಳನ್ನು ಕಲೆ ಹಾಕುತ್ತಿದ್ದಾರೆ.

ಈ ದಾಳಿಯಿಂದಾಗಿ ಅಲ್ಲಿನ ಸ್ಥಳೀಯ ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದ್ದು, ಗಾಯಗೊಂಡವರನ್ನು ಮಿರ್ ಅಲಿ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ ಹಾಗೂ ಗಂಭೀರವಾಗಿ ಗಾಯಗೊಂಡವರನ್ನು ಕ್ವೆಟ್ಟಾ ಮತ್ತು ಕರಾಚಿಯ ಆಸ್ಪತ್ರೆಗಳಿಗೆ ಕಳುಹಿಸುವ ಸಾಧ್ಯತೆಯಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಪೊಲೀಸರು, ಫ್ರಾಂಟಿಯರ್ ಕಾರ್ಪ್ಸ್ (FC) ಮತ್ತು ಇತರ ಕಾನೂನು ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದು, ಇದು ಆತ್ಮಾಹುತಿ ದಾಳಿ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿರುತ್ತದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪಾಕಿಸ್ತಾನದ ಸಚಿವ ಮೊಹ್ಸಿನ್ ನಖ್ವಿ ಈ ಘಟನೆಯನ್ನು ಖಂಡಿಸಿದ್ದು, “ಮುಗ್ಧ ಮಕ್ಕಳನ್ನು ಗುರಿಯಾಗಿಸುವ ಕ್ರೂರಿಗಳಿಗೆ ಯಾವುದೇ ದಯೆ ಬೇಡ. ದೇಶವನ್ನು ಅಸ್ಥಿರಗೊಳಿಸುವ ಹೇಯ ಕೃತ್ಯ ಇದಾಗಿದ್ದು, ರಾಷ್ಟ್ರದಲ್ಲಿ ಒಗ್ಗಟ್ಟಿನಿಂದ ನಾವು ಪ್ರತಿಯೊಂದು ಸಂಚನ್ನೂ ವಿಫಲಗೊಳಿಸುತ್ತೇವೆ ಎಂದು ನಖ್ವಿ ಹೇಳಿಕೆ ನೀಡಿದ್ದಾರೆ. ಗಾಯಗೊಂಡವರು ಶೀಘ್ರವಾಗಿ ಗುಣಮುಖರಾಗಲಿ ಎಂದು ಅವರು ಪ್ರಾರ್ಥಿಸಿದ್ದಾರೆ.

You may also like