6
Tumkur: ನಗರದ ಹೊರವಲಯದ ವಸಂತನರಸಾಪುರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಬುಧವಾರ ಕಾರ್ಖಾನೆಯ ಸಂಪ್ ಕ್ಲೀನ್ ಮಾಡುವಾಗ ಉಸಿರುಗಟ್ಟಿ ಇಬ್ಬರು ಕಾರ್ಮಿಕರು ಮೃತಪಟ್ಟಿದ್ದು, ಮತ್ತಿಬ್ಬರು ಚಿಂತಾಜನಕ ಸ್ಥಿತಿಯಲ್ಲಿದ್ದಾರೆ.
ರಾಸಾಯನಿಕ ಪದಾರ್ಥ ತಯಾರಿಸುವಂತಹ ಲಾರಸ್ ಬಯೋ ಎಂಬ ಇವರು ಕೆಲಸ ಮಾಡುತ್ತಿದ್ದು, ರಾಸಾಯನಿಕ ಸಂಗ್ರಹ ಮಾಡುವಂತಹ ಸಂಪ್ ಒಳಗೆ ಕ್ಲೀನ್ ಮಾಡಲು ಇಳಿದಿರುವ ಸಮಯದಲ್ಲಿ ಉಸಿರುಗಟ್ಟಿ ಅಸ್ವಸ್ಥರಾಗಿದ್ದು, ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಇಬ್ಬರು ಸಾವನ್ನಪ್ಪಿದ್ದಾರೆ. ಉಳಿದ ಇಬ್ಬರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುಮಕೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಧುಗಿರಿ ತಾಲೂಕಿನ ಮಾಗೋಡು ಗ್ರಾಮದ ಪ್ರತಾಪ್ (23), ಶಿರಾ ತಾಲೂಕಿನ ಕಳ್ಳಂಬಳ್ಳಿ ಹೋಬಳಿ ತರೂರು ಗ್ರಾಮದ ವೆಂಕಟೇಶ್ (32) ಮೃತ ದುರ್ದೈವಿಗಳಾಗಿದ್ದು,ತರೂರಿನ ಮಂಜಣ್ಣ (42) ಹಾಗೂ ಯುವರಾಜ್ (32) ಅವರಿಗೆ ಚಿಕಿತ್ಸೆ ಮುಂದುವರೆಯುತ್ತಿದೆ.
