Home » ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಎನ್ಕೌಂಟರ್: ಉಗ್ರರು ಅವಿತು ಕುಳಿತಿರುವ ಶಂಖೆ

ಜಮ್ಮು-ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಎನ್ಕೌಂಟರ್: ಉಗ್ರರು ಅವಿತು ಕುಳಿತಿರುವ ಶಂಖೆ

0 comments

Jammu and kashmir: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ನಲ್ಲಿ ಭಾರತೀಯ ಸೇನೆ ಎನ್ಕೌಂಟರ್ ಆರಂಭ ಮಾಡಿದ್ದು, ಉಗ್ರ ಪಡೆ ಹಾಗೂ ಭಾರತೀಯ ಸೇನೆ ನಡುವೆ ಗುಂಡಿನ ಕಾಳಗದ ಭಾರಿ ಜಟಾಪಟಿ ನಡೆಯುತ್ತಿದೆ ಎಂದು ಗುರುವಾರ ತಿಳಿದುಬಂದಿದೆ.

ಕಿಶ್ತ್ವಾರ್ ಜಿಲ್ಲೆಯ ಚತ್ರೂವಿನ ಸಿಂಗ್‌ಪೋರಾ ಪ್ರದೇಶದಲ್ಲಿ 3-4 ಉಗ್ರರು ಅವಿತು ಕುಳಿತಿರುವ ಅನುಮಾನದ ಮೇರೆಗೆ ಈ ಕಾರ್ಯಾಚರಣೆ ಶುರುವಾಗಿದ್ದು, ಅವರಿರುವ ಜಾಗದ ಬಳಿ ಸೇನೆ ಸಮೀಪಿಸುತ್ತಿದ್ದಂತೆ ಉಗ್ರರು ಸೇನೆಯ ಮೇಲೆ ಗುಂಡಿನ ದಾಳಿ ಪ್ರಾರಂಭ ಮಾಡಿದ್ದಾರೆ ಎನ್ನಲಾಗಿದೆ.

ತಕ್ಷಣವೇ ಆ ದಾಳಿಗೆ ಪ್ರತಿದಾಳಿ ಮಾಡಿರುವ ಸೇನೆ ಇದೀಗ ಎನ್ಕೌಂಟರ್ ಪ್ರಾರಂಭಿಸಿದ್ದು, ಆ ಅಡಗು ತಾಣಗಳನ್ನು ಸುತ್ತುವರೆದಿದೆ.

ಮೇ 16 ರಂದು, ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮತ್ತು ಕೇಂದ್ರ ಮೀಸಲು ಪೊಲೀಸ್ ಪಡೆ, ಭಾರತೀಯ ಸೇನೆ ಕೇಲಾರ್, ಶೋಪಿಯಾನ್ ಮತ್ತು ಟ್ರಾಲ್‌ನಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಗಳಲ್ಲಿ ಆರು ಉಗ್ರರನ್ನು ಹತ್ಯೆ ಮಾಡಿಲಾಗಿತ್ತು. ಇಷ್ಟೆಲ್ಲ ಆದರೂ ಬುದ್ಧಿ ಕಲಿಯದ ಪಾಕಿಸ್ತಾನ ಪದೇ ಪದೇ ತನ್ನ ಮೂರ್ಖತನವನ್ನು ಪ್ರದರ್ಶಿಸುತ್ತಿದೆ.

You may also like