Home » ‘Mysore Sandal Soap’ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯ ನೇಮಕ

‘Mysore Sandal Soap’ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯ ನೇಮಕ

0 comments

Mysore sandal Soap: ಮೈಸೂರು ಸ್ಯಾಂಡಲ್‌ ಸೋಪ್‌ಗೆ (Mysore Sandal Soap) ತೆಲುಗು ನಟಿ, ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ (Tamannaah Bhatia) ಅವರನ್ನು ರಾಯಭಾರಿಯಾಗಿ ಕರ್ನಾಟಕ ಸರ್ಕಾರ ನೇಮಿಸಿದೆ.

ಹೌದು, ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದ ಅಧಿಕೃತ ರಾಯಭಾರಿಯಾಗಿ ಮಿಲ್ಕಿ ಬ್ಯೂಟಿ ನೇಮಕಗೊಂಡಿದ್ದಾರೆ. 2 ವರ್ಷ 2 ದಿನದ ಅವಧಿಗೆ ರಾಯಭಾರಿಯಾಗಲು ನಟಿ ಬರೋಬ್ಬರಿ 6.20 ಕೋಟಿ ಸಂಭಾವನೆ ಪಡೆದಿದ್ದಾರೆ.

ಮೈಸೂರು ಸ್ಯಾಂಡಲ್ ಸೋಪ್ ಅನ್ನು 1916 ರಲ್ಲಿ ಮೈಸೂರಿನ ರಾಜ ಕೃಷ್ಣ ರಾಜ ಒಡೆಯರ್ IV ಬೆಂಗಳೂರಿನಲ್ಲಿ ಸರ್ಕಾರಿ ಸೋಪ್ ಕಾರ್ಖಾನೆಯನ್ನು ಸ್ಥಾಪಿಸಿದಾಗಿನಿಂದ ತಯಾರಿಸಲಾಗುತ್ತಿದೆ. ವರ್ಷಕ್ಕೆ 26,000 ಟನ್‌ ಸೋಪ್ ಉತ್ಪಾದಿಸುವ ಸ್ಥಾಪಿತ ಸಾಮರ್ಥ್ಯವನ್ನು ಈ ಕಾರ್ಖಾನೆಯನ್ನು ಹೊಂದಿದೆ.

You may also like