6
Bengaluru: ರಾಯರ ಮಠದೊಳಗೆ ಅಪರಿಚಿತೆಯೋರ್ವರು ಚಪ್ಪಲಿ ಎಸೆದು ಪರಾರಿಯಾದ ಘಟನೆ ನಡೆದಿದೆ.
ಭಾನುವಾರ ಬೆಂಗಳೂರಿನ (Bengaluru) ಇಂದಿರಾನಗರದ ಶ್ರೀ ರಾಘವೇಂದ್ರ ಸ್ವಾಮಿ ಮಠದಲ್ಲಿ ಘಟನೆ ಜರುಗಿದೆ.
ಬೆಳಗಿನ ಜಾವ ಮಠಕ್ಕೆ ಬಂದಿರುವ ಅಪರಿಚಿತ ಮಹಿಳೆಯೊಬ್ಬಳು ಮಠದ ಕಿಟಕಿಯಿಂದ ಚಪ್ಪಲಿ ಎಸೆದು ತಕ್ಷಣ ಅಲ್ಲಿಂದ ಪರಾರಿಯಾಗಿದ್ದಾಳೆ. ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಈ ಕೃತ್ಯವನ್ನು ಭಕ್ತರು ಮತ್ತು ಸ್ಥಳೀಯರು ತೀವ್ರವಾಗಿ ಖಂಡಿಸಿದ್ದಾರೆ.
ಈ ಘಟನೆಯ ಹಿಂದಿನ ಉದ್ದೇಶ ಏನೆಂಬುದು ತಿಳಿದಿಲ್ಲ.
