Ambani: ಅಂಬಾನಿ ಮತ್ತು ಅವರ ಇಡೀ ಕುಟುಂಬ ಏನೂ ಮಾಡಿದರೂ, ಮಾಡದೆ ಇದ್ದರೂ, ಮಾತಾಡಿದರೂ ಅದು ದೊಡ್ಡ ಸುದ್ದಿಯಾಗುತ್ತದೆ. ಕೊನೆಗೆ ಅವರು ಮೌನ ವಹಿಸಿದರೂ ಅದು ಇನ್ನಷ್ಟು ದೊಡ್ಡ ನ್ಯೂಸ್ ಆಗುತ್ತದೆ. ಆ ಸುದ್ದಿಗಳನ್ನು ಪ್ರಕಟಿಸಲು ಸಾವಿರಾರು ಮಾಧ್ಯಮಗಳು, ಯು ಟ್ಯೂಬ್ ಗಳು ಕಾದು ಕುಳಿತಿರುತ್ತವೆ. ಕೆಲವು ಮಾಧ್ಯಮಗಳಂತೂ ಅಂಬಾನಿ ಕುಟುಂಬದ ಗಾಸಿಪ್ ಮಾಡಿಕೊಂಡು, ಅದನ್ನು ಮಾರಿಕೊಂಡು ಬದುಕುತ್ತಿವೆ. ಅಂತಹ ಇನ್ನೊಂದು ಸುದ್ದಿಯೇ ಈಗ ಮಾಧ್ಯಮದಲ್ಲಿ ಬರುತ್ತಿರುವ ಅಂಬಾನಿ ಮನೆಯ ರೊಟ್ಟಿಯ ಕಥೆ.
600ಕ್ಕೂ ಹೆಚ್ಚು ಸಿಬ್ಬಂದಿ, ಪ್ರತಿ ಒಬ್ಬರಿಗೆ ಎಸಿ ಕೊಠಡಿ,
3 ಹೆಲಿಪ್ಯಾಡ್, 168 ಕಾರುಗಳನ್ನ ಏಕಕಾಲದಲ್ಲಿ ಪಾರ್ಕ್ ಮಾಡಬಲ್ಲ ಪಾರ್ಕಿಂಗ್, ಲಕ್ಸುರಿಯ, ಥರಾವರಿ ಫೆಸಿಲಿಟೀಸ್ ಇರುವ ಅಂಬಾನಿ ಮನೆ ಆಂಟಿಲಿಯಾದಲ್ಲಿ ಏನಿಲ್ಲ ಅನ್ನೋದು ಹುಡುಕೋದು ಕಷ್ಟದ ಕೆಲಸ (Mukesh Ambani Antilia). ಇಲ್ಲಿ 600ಕ್ಕೂ ಹೆಚ್ಚು ನೌಕರರು ದುಡಿಯುತ್ತಿದ್ದಾರೆ. ಆ 600 ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ತಿಂಡಿ ಊಟ ಪಾನೀಯ ಬೇಕಲ್ಲ, ಅದಕ್ಕಾಗಿ ಪ್ರತ್ಯೇಕ ಶೆಫ್ ತಂಡವೇ ಇದೆ. ಅವರು ದಿನoಪ್ರತಿ ಮಾಡಿ ಬೇಯಿಸಿ ಹಾಕುವ ಆಹಾರದ ಪ್ರಮಾಣ ಕೇಳಿದ್ರೆ ನೀವು ಬೆಚ್ಚಿ ಬೀಳೋದು ಗ್ಯಾರಂಟಿ. ಯಾಕೆಂದರೆ, ದಿನಾಲೂ ಒಂದು ದೊಡ್ಡ ಫಂಕ್ಷನ್ ನಡೆದರೆ ಅಲ್ಲಿ ಬೇಯಿಸಿ ಹಾಕುವ ಆಹಾರದ ರೀತಿ ಅಂಬಾನಿಯ ಆಂಟೀಲಿಯಾ ಮನೆಯಲ್ಲಿ ಮಾಡಿ ಬಡಿಸಬೇಕಿದೆ.
ಆ ಚೆಫ್ ತಂಡ ದಿನದ ಬಹುತೇಕ ಸಮಯ ಅಂಬಾನಿ ಕುಟುಂಬದ ಸೇವೆಯಲ್ಲಿ ನಿರತರಾಗಿರುತ್ತಾರೆ. ಅಂಬಾನಿಯವರು ತಮ್ಮ ಸಿಬ್ಬಂದಿಗೆ ಒಂದು ಮಹಡಿಯನ್ನೇ ಮೀಸಲಿಟ್ಟಿದ್ದು, 27 ಅಂತಸ್ತುಗಳಾದ ಈ ಮನೆ ಮೌಲ್ಯ ಸುಮಾರು ₹15,000 ಕೋಟಿಗಳಷ್ಟು ಇದೆ.
ಇಂತಹಾ ಆಂಟಿಲಿಯಾದ ಅತ್ಯಾಧುನಿಕ ಅಡುಗೆಮನೆಯಲ್ಲಿ ದಿನನಿತ್ಯ ಬರೋಬ್ಬರಿ 4,000 ರೊಟ್ಟಿಗಳನ್ನು ತಯಾರಿಸಲಾಗುತ್ತದೆಯಂತೆ. ಆಹಾರಗಳು ಎಲ್ಲಾ ನೌಕರರಿಗೆ ಮತ್ತು ಅತಿಥಿಗಳಿಗೆ ಸಮಾನ ವಿತರಿಸಲಾಗುತ್ತದೆ.
ಹೋಟೆಲ್ ಮ್ಯಾನೇಜ್‌ಮೆಂಟ್ ಪೂರ್ಣಗೊಳಿಸಿದವರಿಗಷ್ಟೇ ಇಲ್ಲಿ ಕೆಲಸ ಮಾಡುವ ಅವಕಾಶ ಇದ್ದು, ಮಾಧ್ಯಮ ವರದಿಗಳ ಪ್ರಕಾರ, ರೊಟ್ಟಿ ತಯಾರಕರಿಗೆ ಕೂಡಾ ತಿಂಗಳಿಗೆ ₹2 ಲಕ್ಷ ತನಕ ವೇತನ ಮತ್ತಿತರ ಸೌಲಭ್ಯ ಲಭ್ಯವಿದೆ.
