Maharashtra: ಅಪಘಾತವಾಗಿದ್ದ ಕಾರನ್ನು ತೆರವು ಮಾಡುತ್ತಿದ್ದವರ ಮೇಲೆ ಟ್ರಕ್ ಹರಿದು ಆರು ಮಂದಿ ಸಾವಿಗೀಡಾದ ಘಟನೆ ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ನಡೆದಿದೆ.
ಮೃತರನ್ನು ಬೀಡ್‌ನ ಜಿಯೋರೈ ನಿವಾಸಿಗಳೆಂದು ಗುರುತಿಸಲಾಗಿದೆ. ಬಾಲು ಅಡ್ಕರೆ, ಭಾಗವತ್ ಪರಲ್ಕರ್, ಸಚಿನ್ ನನ್ನಾವ್ರೆ, ಮನೋಜ್ ಕರಂಡೆ, ಕೃಷ್ಣ ಜಾಧವ್ ಮತ್ತು ದೀಪಕ್ ಸುರಯ್ಯ ಎಂದು ಗುರುತಿಸಲಾಗಿದೆ.
ಈ ಘಟನೆ ಸೋಮವಾರ ರಾತ್ರಿ 8.30 ಕ್ಕೆ ನಡೆದಿದೆ. ದೀಪಕ್ ಅಟ್ಕರೆ ಚಲಾಯಿಸುತ್ತಿದ್ದ ಕಾರು ಬೀಡ್ ಗ್ರಾಮದಿಂದ 100 ಕಿ.ಮೀ. ದೂರದಲ್ಲಿರುವ ರಾಷ್ಟ್ರೀಯ 52 ರ ಡಿವೈಡರ್ ಗೆ ಡಿಕ್ಕಿ ಹೊಡೆದಿದೆ. ಈ ಅಪಘಾತ ನೋಡಿದ ಕೆಲವರು ಕಾರನ್ನು ರಸ್ತೆಯಿಂದ ತೆರವು ಮಾಡುತ್ತಿದ್ದಾಗ ರಾತ್ರಿ 11.30 ರ ಸುಮಾರಿಗೆ ಟ್ರಕ್ ವೊಂದು ಇವರ ಮೇಲೆ ಹಾದು ಹೋಗಿದೆ. ಪರಿಣಾಮ ಆರು ಜನ ಸ್ಥಳದಲ್ಲೇ ಸಾವಿಗೀಡಾಗಿದ್ದು, ಒಬ್ಬರು ಗಾಯಗೊಂಡಿದ್ದಾರೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಟ್ರಕ್ ಚಾಲಕನ ಪತ್ತೆಗೆ ಬಲೆ ಬೀಸಿದ್ದಾರೆ.
