5
Mangalore: ರಾಷ್ಟ್ರೀಯ ಹೆದ್ದಾರಿ 66 ರ ಕೋಡಿಕಲ್ ಕ್ರಾಸ್ ಬಳಿಯಿರುವ ರಾಜಕಾಲುವೆಗೆ ಸಂಚಾರದಲ್ಲಿದ್ದ ಕಾರೊಂದು ಬಿದ್ದಿರುವ ಘಟನೆ ಬುಧವಾರ ಬೆಳಗ್ಗೆ ನಡೆದಿದೆ.
ರಾಜಕಾಲುವೆಯಲ್ಲಿ ಹೂಳೆತ್ತುವ ಕಾರ್ಯ ನಡೆಯುತ್ತಿತ್ತು. ಅದಕ್ಕಾಗಿ ರಾಜಕಾಲುವೆ ಬದಿಯಲ್ಲಿ ಬೆಳೆದಿದ್ದ ಪೊದೆಗಿಡಗಳನ್ನು ತೆಗೆದು ಮರಳು ತುಂಬಿದ ಚೀಲಗಳನ್ನು ತಡೆಯಗಿ ಇಡಲಾಗಿತ್ತು. ಆದರೆ ಸಂಚಾರದಲ್ಲಿದ್ದ ಕಾರೊಂದು ನಿಯಂತ್ರಣ ಕಳೆದು ರಾಜಕಾಲುವೆಗೆ ಬಿದ್ದಿದೆ.
