Home » ಅತ್ತೆ ಕುರುಡಿ ಎಂದು ತಿಳಿದು ಮದ್ವೆ ಹಿಂದಿನ ದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಭಾವೀ ಸೊಸೆ!

ಅತ್ತೆ ಕುರುಡಿ ಎಂದು ತಿಳಿದು ಮದ್ವೆ ಹಿಂದಿನ ದಿನ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಭಾವೀ ಸೊಸೆ!

by ಹೊಸಕನ್ನಡ
0 comments

ಚಿಕ್ಕೋಡಿ: ತಾಲೂಕಿನಲ್ಲಿ 24 ವರ್ಷದ ಯುವತಿಯೊಬ್ಬಳು ವರನ ತಾಯಿ ಕುರುಡಿ ಎಂಬ ವಿಚಾರ ತಿಳಿದು ಆತ್ಮಹತ್ಯೆ ಮಾಡಿಕೊಂಡ ವಿಚಿತ್ರ ಘಟನೆ ನಡೆದಿದೆ. ಹುಡುಗಿಯನ್ನು ಶೃತಿ ಬುರುಡ್ ಎಂದು ಗುರುತಿಸಲಾಗಿದೆ. ಆಕೆಗೆ ಬೆಳಗಾವಿ ಹುಡುಗನ ಜೊತೆ ಮೇ 25 ರಂದು ಮದುವೆ ನಿಶ್ಚಯವಾಗಿತ್ತು.

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನವಲಿಹಾಳ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಭಾವೀ ಸೊಸೆ ಶೃತಿ ಬುರಡ್ ಗೆ ಮದುವೆಯ ಹಿಂದಿನ ದಿನವಷ್ಟೇ ತನ್ನ ಅತ್ತೆಗೆ ಕಣ್ಣು ಕಾಣಿಸಲ್ಲ ಎನ್ನುವ ವಿಷಯ ಗೊತ್ತಾಗಿದೆ. ಅದನ್ನೇ ದೊಡ್ಡ ಆಘಾತ ಅಂದುಕೊಂಡ ಆಕೆ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಅರಿಶಿಣ ಕಾರ್ಯಕ್ರಮದ ದಿನದಂದೇ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಖಡಕಲಾಟ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

You may also like