Home » ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ: ತಿದ್ದುಪಡಿ ಮಸೂದೆ ಮತ್ತೆ ವಾಪಸ್ ಮಾಡಿದ ರಾಜ್ಯಪಾಲರು!

ಕಾಮಗಾರಿಯಲ್ಲಿ ಮುಸ್ಲಿಂ ಮೀಸಲಾತಿ: ತಿದ್ದುಪಡಿ ಮಸೂದೆ ಮತ್ತೆ ವಾಪಸ್ ಮಾಡಿದ ರಾಜ್ಯಪಾಲರು!

0 comments

Bengaluru: ಎರಡು ಕೋಟಿ ರೂಪಾಯಿವರೆಗಿನ ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಮುಸ್ಲಿಂರಿಗೆ ಶೇ.4 ರಷ್ಟು ಮೀಸಲಾತಿ ನೀಡುವ ತಿದ್ದುಪಡಿ ವಿಧೇಯಕ ವಿಚಾರದಲ್ಲಿ ಕರ್ನಾಟಕ ಸರ್ಕಾರಕ್ಕೆ ಮತ್ತೆ ಹಿನ್ನಡೆಯಾಗಿದೆ.

ರಾಷ್ಟ್ರಪತಿಗಳ ಅನುಮೋದನೆ ಕಾದಿರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹಲೋಟ್ 2ನೇ ಬಾರಿಗೆ ರಾಜ್ಯ ಸರಕಾರಕ್ಕೆ ಬಿಲ್ ಅನ್ನು ವಾಪಸ್ ಕಳುಹಿಸಿದ್ದಾರೆ.

ಹಿಂದೊಮ್ಮೆ ಎ.15ರಂದು ಮೊದಲ ಬಾರಿಗೆ ತಿದ್ದುಪಡಿ ಮಸೂದೆ-25ನ್ನು ರಾಜ್ಯಪಾಲರು ವಾಪಸ್ ಕಳುಹಿಸಿದ್ದರು. ಅವತ್ತು ರಾಜ್ಯಪಾಲರು ರಾಷ್ಟ್ರಪತಿಗಳ ಅನುಮೋದನೆ ಪಡೆಯುವಂತೆ ನಿರ್ದೇಶಿಸಿದ್ದರು. ಆದರೆ ಸರ್ಕಾರವು ಮರುಪರಿಶೀಲನೆಗಾಗಿ ಮತ್ತೆ ಮನವಿ ಮಾಡಿತ್ತು. ಆ ಪ್ರಸ್ತಾವನೆ ಯನ್ನೂ ಮುಂದಿನ ಅಗತ್ಯ ಕ್ರಮಕ್ಕಾಗಿ ಅದೇ ನಿರ್ದೇಶನದಂತೆ ಹಿಂದಿರುಗಿಸಿದ್ದಾರೆ.

ಮುಸ್ಲಿಂ ಮೀಸಲಾತಿ ನೀಡುವ ವಿಚಾರ ಈಗ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣಾ ಹಂತದಲ್ಲಿದೆ. ಹಾಗಾಗಿ, ನ್ಯಾಯಾಲಯದಲ್ಲಿರುವ ವಿಷಯದಲ್ಲಿ ಮಧ್ಯಪ್ರವೇಶಿಸುವುದು ಸೂಕ್ತವಲ್ಲ ಎಂದು ಭಾವಿಸಿದ್ದೇನೆ. ಈ ಕಾರಣಕ್ಕೆ ಮಸೂದೆಗೆ ಅಂಕಿತ ಹಾಕದೆ ರಾಷ್ಟ್ರಪತಿಗೆ ಪರಿಶೀಲನೆಗೆ ಬಿಡಲು ನಿರ್ಬಂಧಿತನಾಗಿದ್ದೇನೆ ಎಂದು ರಾಜ್ಯಪಾಲರು ಶರಾ ಬರೆದು ಹೇಳಿದ್ದಾರೆ.

You may also like