Home » Honey Trap: ಹನಿಟ್ರ್ಯಾಪ್ ಆರೋಪ ಪ್ರಕರಣ – ಸಿಐಡಿ ಅಧಿಕಾರಿಗಳಿಂದ ಅಂತಿಮ ವರದಿ ಸಲ್ಲಿಕೆ – ವರದಿಯಲ್ಲೇನಿದೆ?

Honey Trap: ಹನಿಟ್ರ್ಯಾಪ್ ಆರೋಪ ಪ್ರಕರಣ – ಸಿಐಡಿ ಅಧಿಕಾರಿಗಳಿಂದ ಅಂತಿಮ ವರದಿ ಸಲ್ಲಿಕೆ – ವರದಿಯಲ್ಲೇನಿದೆ?

0 comments

Honey Trap: ಸಚಿವ ಕೆ.ಎನ್.ರಾಜಣ್ಣಗೆ ಹನಿಟ್ರ್ಯಾಪ್ ಆರೋಪ ಪ್ರಕರಣದ ಅಂತಿಮ ವರದಿಯನ್ನು ಸಿಐಡಿ ಅಧಿಕಾರಿಗಳಿಂದ ಸಲ್ಲಿಕೆ ಮಾಡಿದ್ದಾರೆ. ಡಿಜಿಐಜಿಪಿಗೆ ವಿಚಾರಣೆ ಮುಕ್ತಾಯ ವರದಿಯನ್ನು ಸಿಐಡಿ ಸಲ್ಲಿಸಿದೆ. ಸಚಿವ ರಾಜಣ್ಣ ದೂರು ಆಧರಿಸಿ ಸಿಐಡಿ ಅಧಿಕಾರಿಗಳು ವಿಚಾರಣೆ ನಡೆಸಿದ್ದರು. ಆದರೆ ಕೆ,ಎನ್.ರಾಜಣ್ಣ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರಗಳು ಸಿಕ್ಕಿಲ್ಲ ಎಂದು ವರದಿ ಹೇಳಿದೆ. ಡಿಜಿಐಜಿ ವರದಿ ಪರಿಶೀಲನೆ ಬಳಿಕ ಸರ್ಕಾರಕ್ಕೆ ಸಲ್ಲಿಕೆ ಮಾಡಲಿದ್ದಾರೆ.

ಗೃಹಮಂತ್ರಿ ಹಾಗೂ ಗೃಹ ಇಲಾಖೆ ಕಾರ್ಯದರ್ಶಿಗೆ ವರದಿ ಸಲ್ಲಿಕೆಯಾಗಲಿದೆ. ತಮ್ಮ ಆರೋಪಕ್ಕೆ ಸಂಬಂಧ ಸಚಿವ ರಾಜಣ್ಣ ಯಾವುದೇ ಮಾಹಿತಿ ನೀಡಲಿಲ್ಲ. ಕೆ.ಎನ್.ರಾಜಣ್ಣ ಅಪರಿಚಿತ ಯುವತಿ ಹಾಗೂ ಯುವಕನ ಬಗ್ಗೆ ಯಾವುದೇ ಮಾಹಿತಿಯನ್ನು ಬಹಿರಂಗ ಪಡಿಸಲಿಲ್ಲ. ದೂರಿನಲ್ಲಿದ್ದ ಅಸ್ಪಷ್ಟ ಮಾಹಿತಿ ಹೊರತುಪಡಿಸಿ ಯಾವುದೇ ಮಾಹಿತಿ ನೀಡಿಲ್ಲ.

ಅಲ್ಲದೆ ಸಿಐಡಿ ವಿಚಾರಣೆಯಲ್ಲೂ ಹನಿಟ್ರ್ಯಾಪ್ ಯತ್ನಿಸಿದ್ದ ಯುವತಿ, ಗಡ್ಡಧಾರಿ ಯುವಕ ಪತ್ತೆಯಾಗಲಿಲ್ಲ. ಇಡೀ ವಿಚಾರಣೆಯಲ್ಲಿ ಯಾರೋಬ್ಬರೂ ಟ್ರ್ಯಾಪ್ಗೆ ಯತ್ನಿಸಿದ ಯುವತಿಯ ಬಗ್ಗೆ ಬಾಯ್ಬಿಟ್ಟಿಲ್ಲ. ಯುವತಿ ಸಚಿವರನ್ನ ಭೇಟಿ ಮಾಡಿದ್ದಾರೆ ಅನ್ನೋದಕ್ಕೆ ಯಾವುದೇ ಸಾಕ್ಷಿಗಳೂ ಲಭ್ಯವಾಗಿಲ್ಲ. ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಅಲ್ಲದೆ ಕೆ.ಎನ್.ರಾಜಣ್ಣ, ಅವರ ಗನ್ಮ್ಯಾನ್, ಸೆಕ್ಯೂರಿಟಿ ಹಾಗೂ ಪಿಎಗಳ ವಿಚಾರಣೆಯನ್ನು ಸಿಐಡಿ ನಡೆಸಿದೆ. ಯುವತಿಗೆ ಕೆನ್ನೆಗೆ ಬಾರಿಸಿ ಕಳುಹಿಸಿದ್ದಾಗಿ ಹೇಳಿದ ರಾಜಣ್ಣ. ಆದರೆ ಈ ಬಗ್ಗೆ ಸೆಕ್ಯೂರಿಟಿ ಹಾಗೂ ಪಿಎಗಳು ಘಟನೆ ನಮಗೆ ಗೊತ್ತಿಲ್ಲ ಎಂದು ಹೇಳಿಕೆ ನೀಡಿದ್ದಾರೆ. ದೂರುಕೊಟ್ಟ ಸಚಿವ ರಾಜಣ್ಣಗೇ ಕೇಸಿನ ಬಗ್ಗೆ ತನಿಖೆ ಮುಂದುವರೆಯುವುದು ಇಷ್ಟವಿಲ್ಲ. ಮಾಹಿತಿ ಕೊರತೆಯಿಂದಾಗಿ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರೆಸಲು ಸಾಧ್ಯವಾಗ್ತಿಲ್ಲ ಎಂದು ಮಾಹಿತಿ ಲಭ್ಯವಾಗಿದೆ.

You may also like