Home » Crime: ವಂಚನೆ ಪ್ರಕರಣ; ಹೀರಾ ಗೋಲ್ಡ್ ನ ನೌಹೇರಾ ಶೇಖ್ ಬಂಧನ!

Crime: ವಂಚನೆ ಪ್ರಕರಣ; ಹೀರಾ ಗೋಲ್ಡ್ ನ ನೌಹೇರಾ ಶೇಖ್ ಬಂಧನ!

0 comments

Crime: ಬಹುಕೋಟಿ ಮೌಲ್ಯದ ಹೀರಾ ಗೋಲ್ಡ್ ಹೂಡಿಕೆ ವಂಚನೆ ಪ್ರಕರಣದ ಪ್ರಮುಖ ಆರೋಪಿ ನೌಹೇರಾ ಶೇಖ್ ರನ್ನು ಹೈದರಾಬಾದ್ ಪೊಲೀಸರು ಫರೀದಾಬಾದ್ ನಿಂದ ಬಂಧಿಸಿದ್ದಾರೆ ಎಂದು ವರದಿಯಾಗಿದೆ.

ವರದಿಗಳ ಪ್ರಕಾರ, ಕೇಂದ್ರ ಅಪರಾಧ ಠಾಣೆ (ಸಿಸಿಎಸ್) ತಂಡವು ಹರಿಯಾಣದಲ್ಲಿ ಅವರ ಚಲನವಲನಗಳನ್ನು ಪತ್ತೆಹಚ್ಚಿದೆ. ನಂತರ ಅವರ ವಿರುದ್ಧ ಬಾಕಿ ಇರುವ ಜಾಮೀನು ರಹಿತ ವಾರಂಟ್ ಗಳಲ್ಲಿ ಬಂಧನ ಪ್ರಕ್ರಿಯೆ ನಡೆದಿದೆ.

2018 ರಲ್ಲಿ ಸಿಸಿಎಸ್ ಹೈದರಾಬಾದ್ ಸಲ್ಲಿಸಿದ ಪ್ರತ್ಯೇಕ ಪ್ರಕರಣಗಳಲ್ಲಿ ನೌಹೇರಾ ಶೇಖ್ ವಿರುದ್ಧ ಮೂರು ಜಾಮೀನು ರಹಿತ ಪ್ರಕರಣಗಳನ್ನು ಹೊರಡಿಸಲಾಗಿತ್ತು. 2024 ರ ಅಕ್ಟೋಬ‌ರ್ ತಿಂಗಳಲ್ಲಿ, ಸುಪ್ರೀಂ ಕೋರ್ಟ್ ಅವರ ಜಾಮೀನನ್ನು ರದ್ದುಗೊಳಿಸಿತು. ಅವರು ಸ್ಥಳೀಯ ನ್ಯಾಯಾಲಯದ ಮುಂದೆ ಶರಣಾಗಲು ವಿಫಲವಾದ ನಂತರ ಆಕೆಯನ್ನು ಬಂಧಿಸಲಾಗಿದೆ.

You may also like