Congress: ಕಾಂಗ್ರೆಸ್‌ನವರು ನೀಡುವ ಗ್ಯಾರಂಟಿಗಾಗಿ ಹೊಟ್ಟೆಬಟ್ಟೆ ಕಟ್ಟಿಕೊಳ್ಳುವ ದಯನೀಯ ಸ್ಥಿತಿ ಮಂಗಳೂರಿನ ಜನರಿಗೆ ಬಂದಿಲ್ಲ. ಗ್ಯಾರಂಟಿ ಘೋಷಣೆಯ ನಂತರವೂ ಉಡುಪಿ-ದಕ್ಷಿಣ ಕನ್ನಡದಲ್ಲಿ ಕಾಂಗ್ರೆಸನ್ನು ಎಬ್ಬಿಸಲು ವಿಶೇಷ ಯೋಜನೆ ರೂಪಿಸಿ ಎಂದು ಹೇಳಿ ಮಾಸಿ ಸಚಿವ ವಿ ಸುನಿಲ್ ಕುಮಾರ್ ಡಿಸಿಎಂ ನ್ನು ತರಾಟೆಗೆ ತೆಗೆದುಕೊಂಡರು.
“ಮಂಗಳೂರು ಜನ ಗ್ಯಾರಂಟಿ ಬೇಡ ಅಂದಿದ್ದರು. ಅವರೇ ಮೊದಲು ಕ್ಯೂನಲ್ಲಿ ನಿಂತಿದ್ದರು. ಮಂಗಳೂರು ಜನಕ್ಕೆ ಹೊಟ್ಟೆಬಟ್ಟೆಗೆ ಕಾಂಗ್ರೆಸ್ ಬೇಕು. ವೋಟ್‌ಗೆ ಬೇರೆಯವರು ಬೇಕುʼ ಎಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಡಿಸಿಎಂ ಹೇಳಿಕೆ ನೀಡಿದ್ದರು.
ಡಿಕೆ ಶಿವಕುಮಾರ್ ಅವರಿಗೆ ಕನಕಪುರದ ಆಚೆ ಬೇರೆನು ನಡೆಯುತ್ತಿದೆ ಎನ್ನುವುದರ ಕುರಿತು ಗೊತ್ತಿಲ್ಲ. ಅದಕ್ಕೆ ಅನ್ಯ ಜಿಲ್ಲೆಗಳ ಕುರಿತು ತಾತ್ಸಾರದ ಮಾತನಾಡುತ್ತಿದ್ದಾರೆ. ಮಂಗಳೂರು ಸೇರಿ ಕರಾವಳಿಯ ಜನ ಸ್ವಾಭಿಮಾನಿಗಳು. ಬೆಂಗಳೂರು ನಂತರ ಅತಿಹೆಚ್ಚು ತೆರಿಗೆ ಸಂಗ್ರಹವಾಗುವುದು ಇಲ್ಲಿಂದಲೇ. ನಿಮ್ಮ ಗ್ಯಾರಂಟಿ ನಂಬಿ ಮತದಾನ ಮಾಡು ಬೌದ್ಧಿಕ ದಾರಿದ್ರ್ಯ ನಮಗೆ ಬಂದಿಲ್ಲ ಎಂದು ಪತ್ರಿಕಾ ಹೇಳಿಕೆ ನೀಡಿರುವ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು ಹೇಳಿದ್ದಾರೆ.
ಮಂಗಳೂರಿಗೆ ನಿಮ್ಮ ಗ್ಯಾರಂಟಿ ಅನ್ವಯವಾಗುವುದಿಲ್ಲ ಎಂದು ನಿಬಂಧನೆ ವಿಧಿಸಿದ್ದೀರೇ? ಮಂಗಳೂರಿನವರು ಅರ್ಜಿ ಸಲ್ಲಿಸಬಾರದು ಎಂದು ಕರಾರು ಹೇರಿದ್ದೀರೇ? ಕರ್ನಾಟಕದ ಒಂದು ಭಾಗ ಮಂಗಳೂರು. ಅದಕ್ಕೆ ಅರ್ಜಿ ಸಲ್ಲಿಸಿದ್ದಾರೆ. ನಿಮ್ಮ ಗ್ಯಾರಂಟಿ ಯೋಜನೆ ಕನಕಪುರದವರಿಗೆ ಮಾತ್ರ ಸೀಮಿತವಲ್ಲ. ನಿಮ್ಮ ಓಲೈಕೆ ರಾಜಕಾರಣವೇ ಕರಾವಳಿ ಜಿಲ್ಲೆಗಳಲ್ಲಿ ಕೋಮು ಸಾಮರಸ್ಯ ಹದಗೆಡುತ್ತಿದೆ. ಅದಕ್ಕೆ ಮಂಗಳೂರಿನ ಜನರು ನಿಮ್ಮನ್ನು ತಿರಸ್ಕಾರ ಮಾಡಿದ್ದಾರೆ.
ನಾವು ಬೇಕಿದ್ದರೆ ಹೊಟ್ಟೆಬಟ್ಟೆ ಕಟ್ಟಿ ದುಡಿಯುತ್ತೇವೆ. ನಿಮ್ಮ ಹಂಗು, ದಯಾ ಭಿಕ್ಷೆ ಬೇಕಿಲ್ಲ. ಇಂಥ ಕೀಳು ಅಭಿರುಚಿಯ ಹೇಳಿಕೆ ನೀಡಿ ಮಂಗಳೂರಿನವರ ಆತ್ಮಾಭಿಮಾನ ಕೆಣಕಬೇಡಿ ಎಂದು ಸುನಿಲ್ ಕುಮಾರ್ ಹೇಳಿದರು.
