Home » Panjab: ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಕ್ಕೂ ಹೆಚ್ಚು ಜನರಿಗೆ ಗಾಯ!

Panjab: ಪಟಾಕಿ ಕಾರ್ಖಾನೆ ಸ್ಫೋಟ, 4 ಮಂದಿ ಸಾವು, 25 ಕ್ಕೂ ಹೆಚ್ಚು ಜನರಿಗೆ ಗಾಯ!

0 comments

Panjab: ಪಂಜಾಬ್​ನ (Panjab)ಶ್ರೀ ಮುಕ್ತಸರ್ ಸಾಹಿಬ್ ಜಿಲ್ಲೆಯ ಲಂಬಿ ಗ್ರಾಮದ ಬಳಿ ಶುಕ್ರವಾರ ಪಟಾಕಿ ತಯಾರಿಕೆ ಮತ್ತು ಪ್ಯಾಕೇಜಿಂಗ್ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ವಲಸೆ ಕಾರ್ಮಿಕರು ಸಾವನ್ನಪ್ಪಿದ್ದು, ಸುಮಾರು 25 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.

ಶ್ರೀ ಮುಕ್ತಸರ್ ಸಾಹಿಬ್‌ನ ಲಂಬಿ ಪ್ರದೇಶದ ಸಿಂಘಾವಲಿ-ಕೋಟ್ಲಿ ರಸ್ತೆಯಲ್ಲಿರುವ ಎರಡು ಅಂತಸ್ತಿನ ಕಾರ್ಖಾನೆಯಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ನಂತರ, ಗಾಯಾಳುಗಳನ್ನು ಚಿಕಿತ್ಸೆಗಾಗಿ ಏಮ್ಸ್ ಭಟಿಂಡಾ ಆಸ್ಪತ್ರೆಗೆ ಕಳುಹಿಸಲಾಯಿತು. ಪರಿಸ್ಥಿತಿಯನ್ನು ನಿಯಂತ್ರಿಸಲು ಮತ್ತು ಬಲಿಪಶುಗಳಿಗೆ ಸಹಾಯ ಮಾಡಲು ಪೊಲೀಸರು ಮತ್ತು ತುರ್ತು ಸೇವೆಗಳು ತ್ವರಿತವಾಗಿ ಸ್ಥಳಕ್ಕೆ ಆಗಮಿಸಿದ್ದವು.

You may also like