6
Polali: ಬಿಗ್ಬಾಸ್ ಖ್ಯಾತಿಯ ಗೌತಮಿ ಜಾಧವ್ ದಂಪತಿ ಪೊಳಲಿ (Polali) ರಾಜರಾಜೇಶ್ವರಿ ದೇಗುಲಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆಯನ್ನು ಸಲ್ಲಿಸಿದರು.
ಗೌತಮಿ ಜಾಧವ್ ಅವರು ತಮ್ಮ ಹೆತ್ತವರು ಮತ್ತು ಗಂಡನ ಜೊತೆ ದೇಗುಲಕ್ಕೆ ಆಗಮಿಸಿ ಭಕ್ತಿಯಿಂದ ಪ್ರಾರ್ಥನೆಯನ್ನು ಸಲ್ಲಿಸಿದ್ದಾರೆ. ದೇವಾಲಯದ ಆಡಳಿತ ಸಮಿತಿ ವತಿಯಿಂದ ಅವರನ್ನು ಗೌರವಪೂರ್ವಕವಾಗಿ ಬರಮಾಡಿಕೊಳ್ಳಲಾಯಿತು.
